ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲೇಶಿಯಾದಲ್ಲಿ ಧಾರವಾಡ ಕುವರನಿಗೆ ಕರಾಟೆಯಲ್ಲಿ ಕಂಚಿನ ಪದಕ

ಧಾರವಾಡ : ಸಾಧನೆಗೆ ವಯಸ್ಸಿನ ಹಂಗಿಲ್ಲ ಹಾಗೆ ಈ ಪುಟ್ಟ ಪೊರ ತೋರಿದ ಸಾಧನೆ ಅಂತಹುದು. ಹೌದು ಧಾರವಾಡ ಮಾಳಾಪುರದ ನಿವಾಸಿ ಶ್ರೇಯಸ್ ಈರಣ್ಣ ಅಕ್ಕಿಮರಡಿ ಮಲೇಶಿಯಾದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕ ಗೆದ್ದು ಬಂದು ಭಾರತಕ್ಕೆ ಹೆಮ್ಮೆ ತಂದಿದ್ದಾನೆ.

ಹೌದು ಧಾರವಾಡ ಮಲ್ಲಸಜ್ಜನ ಶಾಲೆಯ ಈ ಪುಟ್ಟ ಪೊರ ಕರಾಟೆಯಲ್ಲಿ ಸ್ಪರ್ಧಿಸಲು ಮಲೇಶಿಯಾಕ್ಕೆ ತೆರಳಿ ಈಗ ಕಂಚು ಗೆದ್ದು ಬಂದಿದ್ದು ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಪೊರನ ಸಾಧನೆಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.

18 ನೇ ಅಂತಾರಾಷ್ಟ್ರೀಯ ಓಕಿನವಾ ಗೊಜು ರೂಂ ಇಪ್ಪೊ ಸಿಟಿ ಕರಾಟೆ ಓಪನ್ ಚಾಂಪಿಯನ್ ಶಿಪ್ 2022 ನಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದು ಭಾರತದ ಭಾವುಟ ಹಾರಿಸಿದ್ದಾನೆ.

ಈತನಿಗೆ ಗುರುಗಳಾದ ವಿನಯ ನಡಗೇರ ಹಾಗೂ ಮಂಜುನಾಥ ಹೂಗಾರ ಹಾಗೂ ಶಿಕ್ಷಕರು ಕರಾಟೆ ತರಬೇತಿ ನೀಡಿದರು. ಅದರಂತೆ ಶ್ರೇಯಸ್ ತಂದೆ ಈರಣ್ಣ ಅಕ್ಕಿಮರಡಿ ಆತನ ಸಾಧನೆಗೆ ಪ್ರೋತ್ಸಾಹಿಸಿ ಆತನನ್ನು ಮಲೇಶಿಯಾಕ್ಕೆ ಕಳುಹಿಸಿದ್ದರು. ಈಗ ಶ್ರೇಯಸ್ ಕಂಚಿನ ಪದಕ ಪಡೆದ ಹಿನ್ನೆಲೆಯಲ್ಲಿ ಧಾರವಾಡ ಜನರು ಹಾಗೂ ಕುಟುಂಬ ಸದಸ್ಯರು ಶ್ರೇಯಸ್ ಅಕ್ಕಿಮರಡಿ ಸಾಧನೆಯನ್ನು ಕೊಂಡಾಡಿದ್ದಾರೆ.

Edited By :
Kshetra Samachara

Kshetra Samachara

04/06/2022 07:27 pm

Cinque Terre

51.83 K

Cinque Terre

10

ಸಂಬಂಧಿತ ಸುದ್ದಿ