ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಬಹು ಜಿದ್ದಾಜಿದ್ದಿನ ಟಗರಿನ ಕಾಳಗ: ಗೆದ್ದ ಟಗರಿಗೆ ಒಲಿದಳು ಲಕ್ಷ್ಮೀ

ಕುಂದಗೋಳ: ಪಟ್ಟಣದಲ್ಲಿ ಭಾರಿ ಜಿದ್ದಾಜಿದ್ದಿನ ಹಾಲು ಹಲ್ಲು ಮತ್ತು ನಾಲ್ಕು ಹಲ್ಲಿನ ಟಗರಿನ ಕಾಳಗಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣ ಸಾಕ್ಷಿಯಾಗಿ ಆಟೋ ಚಾಲಕರ ಸಂಘದ ವತಿಯಿಂದ ಟಗರಿನ ಕಾಳಗ ನೆರವೇರಿದವು. ಆಟೋ ಚಾಲಕರ ಸಂಘದ ವತಿಯಿಂದ ಆರಂಭವಾದ ಬಹು ಜಿದ್ದಾಜಿದ್ದಿನ ಟಗರಿನ ಕಾಳಗದಲ್ಲಿ ಕುಂದಗೋಳ ತಾಲೂಕ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಟಗರುಗಳು ಪ್ರಶಸ್ತಿ ಸುತ್ತಿಗಾಗಿ ತೀವ್ರ ಪೈಪೋಟಿ ನಡೆಸಿದವು.

ಶುಕ್ರವಾರ ರಾತ್ರಿಯಿಡೀ ನಡೆದ ಟಗರಿನ ಕಾಳಗದಲ್ಲಿ ಹಾಲು ಹಲ್ಲಿನ ಪ್ರಥಮ ಬಹುಮಾನ ಹೊಸಳ್ಳಿ ಟಗರು, ದ್ವಿತೀಯ ಬಹುಮಾನ ಬಂಡಿವಾಡ ಟಗರು ತೃತೀಯ ಬಹುಮಾನ ಗುಡಗೇರಿ ಟಗರು ಪಡೆದವು. ಅದರಂತೆ ಎರೆಡು ಹಲ್ಲಿನ ಟಗರಿನ ಕಾಳಗದ ಪ್ರಥಮ ಬಹುಮಾನ ಹುಬ್ಬಳ್ಳಿ ಟಗರು, ದ್ವಿತೀಯ ಬಹುಮಾನ ಚನ್ನಾಪೂರ ಟಗರು, ತೃತೀಯ ಬಹುಮಾನ ಕುಂದಗೋಳ ಟಗರು ಪಡೆದವು ಕಾರ್ಯಕ್ರಮವನ್ನು ಕುಂದಗೋಳದ ಹಿರಿಯರು ಪ್ರಶಸ್ತಿ ಹಾಗೂ ಟಗರುಗಳಿಗೆ ಪೂಜೆ ಸಲ್ಲಿಸಿ ಆರಂಭಿಸಿದರು.

Edited By : Nagesh Gaonkar
Kshetra Samachara

Kshetra Samachara

28/05/2022 11:01 pm

Cinque Terre

41.12 K

Cinque Terre

0

ಸಂಬಂಧಿತ ಸುದ್ದಿ