ಹುಬ್ಬಳ್ಳಿ: ಹುಬ್ಬಳ್ಳಿಯ ಇಬ್ಬರು ಈಜು ಪಟುಗಳು ಕರುನಾಡಿಗೆ ಹೆಮ್ಮೆ ತರಲು ಉತ್ತರ ಭಾರತಕ್ಕೆ ಹೊರಟಿದ್ದು, ಅವರಿಗೆ ಶುಭಾಶಯಗಳ ಮಹಾಪುರ ಹರಿದು ಬರುತ್ತಿದೆ.
ಹುಬ್ಬಳ್ಳಿಯ ಫ್ಲ್ಯಾಶ್ ಸ್ವಿಮ್ಮಿಂಗ್ ತರಬೇತಿ ಸಂಸ್ಥೆಯ ಈಜು ಪಟುಗಳಾದ ಸೌಜನ್ಯ ಸಂಗಮ್ ಹಾಗೂ ಉದ್ಧವ್ ಕುರಂದ್ವಾಡ್ ದಕ್ಷಿಣ ಭಾರತದಿಂದ ಮೊದಲ ಬಾರಿಗೆ 'ರಾಷ್ಟ್ರ ಮಟ್ಟದ ಫಿನ್ಸ್ ಸ್ವಿಮ್ಮಿಂಗ್' ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಏಪ್ರಿಲ್ 9, 10ರಂದು ರಾಜಸ್ಥಾನದ ಜೋಧಪುರ್‌ನಲ್ಲಿ ಸ್ಪರ್ಧೆ ನಡೆಯಲಿದ್ದು, ಇದರಲ್ಲಿ ಕರ್ನಾಟಕದ ಈಜು ಪಟುಗಳು ಸ್ಪರ್ಧೆ ಮಾಡುತ್ತಿರುವುದೇ ಹೆಮ್ಮೆಯ ವಿಚಾರ.
ಈ ಕುರಿತು ಮಾತನಾಡಿರುವ ಈಜು ತರಬೇತುದಾರರಾದ ಭಾರತಿ ಕೊಠಾರಿ, ಸಾಮಾನ್ಯ ಈಜು ಸ್ಪರ್ಧೆಗಿಂತ ಫಿನ್ಸ್ ಸ್ವಿಮ್ಮಿಂಗ್ ಸ್ಪರ್ಧೆ ವಿಭಿನ್ನವಾಗಿರುತ್ತದೆ. ಮಧ್ಯ ಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನದ ಈಜು ಪಟುಗಳು ಹೆಚ್ಚಾಗಿ ರಾಷ್ಟ್ರ ಮಟ್ಟದ ಫಿನ್ಸ್ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಇದೇ ಮೊದಲ ಬಾರಿ ದಕ್ಷಿಣ ಭಾರತದಿಂದ ನನ್ನ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯ ಈಜು ಪಟುಗಳು ರಾಷ್ಟಮಟ್ಟದಲ್ಲಿ ಸಾಧನೆ ಮಾಡಲು ಹೊರಟಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ. ಈ ಮಕ್ಕಳಿಗೆ ಪಬ್ಲಿಕ್ ನೆಕ್ಸ್ಟ್ ವೀಕ್ಷಕರಿಂದ ಆಲ್ ದಿ ಬೆಸ್ಟ್ ತಿಳಿಸೋಣ..
ವರದಿ: ವಿಜಯಕುಮಾರ ಗಾಣಿಗೇರ, ಸ್ಪೋರ್ಟ್ಸ್ ಬ್ಯರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/04/2022 09:01 pm