ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಯುವಕನಿಂದ ಶಕ್ತಿ ಪ್ರದರ್ಶನ-ಜನ ಮೆಚ್ಚಿಕೊಂಡಾಡಿದರು

ಕಲಘಟಗಿ: ತಾಲೂಕಿನ ಮಡಕಿಹೊನ್ನಿಹಳ್ಳಿ ಗ್ರಾಮದ 21ರ ಯುವಕ ಸಂತೋಷ ಆಲದಕಟ್ಟಿ ಯುಗಾದಿ ಹಬ್ಬದ ಪ್ರಯುಕ್ತ ಶಕ್ತಿ ಪ್ರದರ್ಶನ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರನಾಗಿದ್ದಾನೆ.

ಗ್ರಾಮದಲ್ಲಿ ಆಯೋಜಿಸಿದ್ದ ಶಕ್ತಿ ಪ್ರದರ್ಶನ ಕಾರ್ಯಕ್ರಮವನ್ನು ಶ್ರೀ ಚನ್ನವೀರ ಮಹಾಶಿವಯೋಗಿಗಳು ಹಾಗೂ ಶಾಸಕರಾದ ಸಿ.ಎಂ ನಿಂಬಣ್ಣವರ ಮೈದಾನದಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಸಾನಿಧ್ಯ ವಹಿಸಿದ್ದ ಚನ್ನವೀರ ಮಹಾಶಿವಯೋಗಿಗಳು ಮಾತನಾಡಿ, ಸಂತೋಷ ಇವರು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ. ಇಂದಿನ ಯುವಕರು ಚಟಗಳಿಗೆ ದಾಸರಾಗಿ ಸಮಾಜಕ್ಕೆ ಮಾರಕಾಗುವ ಬದಲು ತಮ್ಮ ಜೀವನದಲ್ಲಿ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಂಡು ನಾಡು ನುಡಿ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳ ಬೇಕು ಎಂದರು.

ಶಾಸಕರು ಮಾತನಾಡಿ ಸಂತೋಷ ಎಂಬ ಯುವಕ ನನ್ನ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳ್ಳಪಟ್ಟಿರುವುದು ನನಗೆ ಇನ್ನು ಹೆಮ್ಮೆಯ ವಿಷಯ ತಾಲೂಕಿನಾದ್ಯಂತ ಯುವಕರಿಗೆ ಸಂತೋಷ ಮಾದರಿಯಾಗಿದ್ದಾನೆ. ಇವನ ಹೆತ್ತ ತಂದೆ ತಾಯಿ ಹೆಮ್ಮೆ ಪಡುವಂತ ಮಗನಾಗಿದ್ದಾನೆ. ಇವರ ಅಣ್ಣ ಕೂಡ ಶಕ್ತಿ ಪ್ರದರ್ಶನ ಮಾಡಿದನ್ನು ಜ್ಞಾಪಿಸಿಕೊಂಡರು.

ಸಂತೋಷ ಆಲದಕಟ್ಟಿ ಮಾತನಾಡಿ ನನ್ನ ಎಲ್ಲಾ ಪ್ರದರ್ಶನಕ್ಕೆ ನನ್ನ ಗುರುಗಳಾದ ಶಾಂತಯ್ಯ.ಹಿರೇಮಠ ಇವರ ಆಶಿರ್ವಾದವೇ ಕಾರಣ ನಾನು ನಿತ್ಯದಲ್ಲಿ ತಾಲಿಮ ಜೊತೆಗೆ ಸಸ್ಯಹಾರವನ್ನು ಮಾತ್ರ ಸೇವಿಸುತ್ತೆನೆ ಎಂದರು.

ಬಲ ಪ್ರದರ್ಶನದಲ್ಲಿ ಬಲಗೈ ಹಾಗೂ ಎಡಗೈಯಿಂದ 25ಕೆ.ಜಿ ಯಿಂದ 71ಕೆ.ಜಿ ವರೆಗಿನ ಸಾಂಗ್ರಾಣಿ ಕಲ್ಲುಗಳನ್ನು ಎತ್ತುವುದು,ಬೆನ್ನಿನ ಮೇಲಿನ ಪ್ರದರ್ಶನ ಬಂಡಿಗಾಲಿ ಪ್ರದರ್ಶನ,ಚೀಲದ ಪ್ರದರ್ಶನ,ಚಕ್ಕಡಿ ಎಳೆಯುವ ಪ್ರದರ್ಶನ ಇನ್ನು ಹತ್ತು ಹಲವು ಬಲ ಪ್ರದರ್ಶನಗಳನ್ನು ಸಾರ್ವಜನಿಕರ ಎದುರಿಗೆ ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ಪ್ರಮುಖ ಗಣ್ಯರು, ಗ್ರಾಮಸ್ಥರು,ಅಭಿಮಾನಿಗಳು ಹಾಗೂ ಮಾಜಿ ಸೈನಿಕರು ನೆರೆದಿದ್ದರು.

Edited By :
Kshetra Samachara

Kshetra Samachara

04/04/2022 08:19 am

Cinque Terre

15.35 K

Cinque Terre

2

ಸಂಬಂಧಿತ ಸುದ್ದಿ