ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಬನ್ನಿ ಮಕ್ಕಳೇ ಕ್ರೀಡಾ ಸಂಸ್ಥೆಯ ಉಚಿತ ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳಿ

ಕುಂದಗೋಳ: ಕುಂದಗೋಳ ಪಟ್ಟಣದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕ್ರೀಡಾ ಸಂಸ್ಥೆ ಮೂರು ದಿನಗಳ ಕಾಲ ಮಕ್ಕಳಿಗೆ ಉಚಿತ ಬೇಸಿಗೆ ಕ್ರೀಡಾ ಶಿಬಿರವನ್ನು ಆಯೋಜಿಸಿ ದೈಹಿಕ ಮಾನಸಿಕ ಬೆಳವಣಿಗೆಗೆ ಪೂರಕವಾದ ಕ್ರೀಡಾಭ್ಯಾಸವನ್ನು ನುರಿತ ತರಬೇತುದಾರರಿಂದ ನೀಡುತ್ತಿದೆ.

ಹೌದು ! ಕುಂದಗೋಳ ಪಟ್ಟಣದಿಂದ ದೇವನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಳಿ ಗಂಗಾಧರೇಶ್ವರ ಟ್ರೇಡರ್ಸ್ ಪಕ್ಕದಲ್ಲಿ ಸುಸಜ್ಜೀತವಾಗಿ ನಿರ್ಮಾಣವಾದ ಕ್ರೀಡಾ ಸಂಸ್ಥೆ ಬೇಸಿಗೆ ಶಿಬಿರ ಆಯೋಜಿಸಿದೆ. ಈ ಮೂಲಕ ಮಕ್ಕಳಿಗೆ ಬ್ಯಾಡ್ಮಿಂಟನ್ ಸೇರಿದಂತೆ ದೈಹಿಕ ಕಸರತ್ತಿನ ಇತರೆ ಕ್ರೀಡೆಯನ್ನು ಇಂದಿನಿಂದ ಎರೆಡು ದಿನಗಳ ಕಾಲ ಉಚಿತವಾಗಿ ಹೇಳಿಕೊಡುತ್ತಿದೆ.

ಈ ಕ್ರೀಡಾ ಸಂಸ್ಥೆಯ ಬೇಸಿಗೆ ಕ್ರೀಡಾ ಶಿಬಿರದಲ್ಲಿ ಈಗಾಗಲೇ ಕುಂದಗೋಳ ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿ ಮಕ್ಕಳು ಭಾಗವಹಿಸಿ ತರಬೇತಿ ಪಡೆಯುತ್ತಿದ್ದಾರೆ. ಆಸಕ್ತ ಮಕ್ಕಳು ಸಂಪೂರ್ಣ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡು ತರಬೇತಿ ಪಡೆಯಲು ನೋಂದಾಯಿಸಲು ಸೂಚಿಸಲಾಗಿದೆ.

ಆಸಕ್ತ ಮಕ್ಕಳ ಪಾಲಕರು 9880280660 ಅಥವಾ 9448433653 ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು ಅಥವಾ ಕ್ರೀಡಾ ಸಂಸ್ಥೆಗೆ ಭೇಟಿ ನೀಡಬಹುದು.

Edited By :
Kshetra Samachara

Kshetra Samachara

28/03/2022 10:53 pm

Cinque Terre

39.04 K

Cinque Terre

1

ಸಂಬಂಧಿತ ಸುದ್ದಿ