ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೆ ಕ್ರಿಕೆಟ್ ಮೈದಾನದಲ್ಲಿ ನಡೆದ ರೆಡ್ ಕ್ರಿಕೆಟ್ ಟೂರ್ನಾಮೆಂಟ್ ಅಭೂತಪೂರ್ವ ಗೆಲುವು ಕಂಡಿದೆ. ಪಂದ್ಯಾವಳಿಯಲ್ಲಿ ಭಾಗವಹಿಸಿದ ಸುಮಾರು 15 ಕ್ಕೂ ಹೆಚ್ಚು ತಂಡಗಳು ಉತ್ತಮ ಪ್ರದರ್ಶನ ತೋರಿವೆ. ಮುಕ್ತ ಟೂರ್ನಾಮೆಂಟ್ ಇದಾಗಿದ್ದರಿಂದ ಖಾಸಗಿ ಹಾಗೂ ಸರ್ಕಾರಿ ಉದ್ಯೋಗಿಗಳು ತಮ್ಮದೇ ತಂಡ ರಚಿಸಿಕೊಂಡು ಪಂದ್ಯಾವಳಿಯಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಂಡಿದ್ದರು.
ಇನ್ನು ಟೂರ್ನಾಮೆಂಟ್‌ನ ಕ್ರಿಕೆಟ್‌ಗೆ ಜೀವ ತುಂಬುವುದೇ ಕಾಮೆಂಟರಿ. ರೆಡ್ ಎಫ್‌ಎಂ ಆರ್‌ಜೆ ರಶೀದ್ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಕಾಮೆಂಟರಿ ನೀಡುತ್ತ ಆರ್‌ಪಿಎಲ್‌ಗೆ ಕಳೆ ತುಂಬಿದರು. ಇದರ ಒಂದು ಝಲಕ್ ಇಲ್ಲಿದೆ ನೋಡಿ.
ಈ ಪಂದ್ಯಾವಳಿಗೆ ಬೆನ್ನೆಲುಬಾಗಿ ನಿಂತು ಆಯೋಜನೆ ಜವಾಬ್ದಾರಿ ನೋಡಿಕೊಂಡ ರೆಡ್ ಎಫ್‌ಎಂ ಹುಬ್ಬಳ್ಳಿ ಹಾಗೂ ಮಂಗಳೂರು ಸ್ಟೇಷನ್ ಹೆಡ್ ಶೋಭಿತ್ ಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ತಮ್ಮ ಖುಷಿ ಹಂಚಿಕೊಂಡರು.
ಪಂದ್ಯಾವಳಿ ಅಥವಾ ಯಾವುದೇ ಇವೆಂಟ್ ಯಶಸ್ವಿ ಆಗಬೇಕಾದ್ರೆ ಪ್ರಾಯೋಜಕತ್ವ ಅತ್ಯಂತ ಮುಖ್ಯ. ಆರ್‌ಪಿಎಲ್ ಪಂದ್ಯಾವಳಿಯ ಪ್ರಾಯೋಜಕತ್ವದ ರೂವಾರಿ ಹಾಗೂ ರೆಡ್ ಎಫ್‌ಎಂ ಗ್ರುಪ್ ಮ್ಯಾನೇಜರ್ ಶ್ರೀಕೃಷ್ಣ ಬೆಂಗೇರಿ ಪಬ್ಲಿಕ್ ಜೊತೆ ಸಂತಸ ಹಂಚಿಕೊಂಡಿದ್ದಾರೆ.
ಇನ್ನು ಪಂದ್ಯಾವಳಿಯ ಪ್ರೆಸೆಂಟಿಂಗ್ ಸ್ಪಾನ್ಸರ್ ನೀಡಿದ ಶ್ರೀ ಪೋರವಾಲ್ ಸನ್ಸ್ ಜ್ಯುವೆಲ್ಲರ್ಸ್ ಮಾಲೀಕ ಅಖಿಲ್ ಪೋರವಾಲ್ ಟೂರ್ನಾಮೆಂಟ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಒಟ್ನಲ್ಲಿ ರೆಡ್ ಎಫ್‌ಎಂ ಆಯೋಜಿಸಿದ್ದ ರೆಡ್ ಪ್ರೀಮಿಯರ್ ಲೀಗ್ ತನ್ನ ಮೊದಲನೇ ಸೀಸನ್‌ಗಿಂದ ಈ ಸಲದ ಎರಡನೇ ಸೀಸನ್‌ನಲ್ಲಿ ನಿರೀಕ್ಷೆ ಮೀರಿ ಗೆಲುವು ಕಂಡಿದೆ. ಹಾಗೂ ಎಲ್ಲ ಆಟಗಾರರಿಗೆ ಕ್ರೀಡಾ ಸ್ಫೂರ್ತಿ ನೀಡಿದೆ.
Kshetra Samachara
27/03/2022 11:10 pm