ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ, ಚಾಂಗದೇವ ಯಮನೂರ ಸಿ ತಂಡ ಪ್ರಥಮ

ನವಲಗುಂದ : ಪಟ್ಟಣದ ಶಂಕರ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ 65 ಕೆಜಿಯ ರಾಜ್ಯಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ನಿನ್ನೆ ರಾತ್ರಿ ಮುಕ್ತಾಯಗೊಂಡಿದ್ದು, ಪ್ರಥಮ ಬಹುಮಾನವನ್ನು ಚಾಂಗದೇವ ಯಮನೂರ ಸಿ ತಂಡವು ತನ್ನ ಮುಡಿಗೇರಿಸಿಕೊಂಡಿದೆ.

ರಾಜ್ಯಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಮಾಜಿ ಶಾಸಕ ಎನ್.ಹೆಚ್ ಕೋನರಡ್ಡಿ ಅವರಿಂದ ಉದ್ಘಾಟನೆಗೊಂಡಿತು. ಇನ್ನು ಚಾಂಗದೇವ ಯಮನೂರ ಎ ತಂಡ ದ್ವಿತೀಯ ಬಹುಮಾನವನ್ನು ಹಾಗೂ ತೃತೀಯ ಎಂ ಆರ್ ಸಿ ಊಟಿ ಮತ್ತು ಕೆ ಆರ್ ಎಸ್ ಅಳಗವಾಡಿ ತಂಡ ನಾಲ್ಕನೇ ಬಹುಮಾನ ಪಡೆದುಕೊಂಡಿದೆ. ಇನ್ನು ನಿರ್ಣಾಯಕರಾಗಿ ವಿ ಆರ್ ಹಾದಿಮನಿ, ಆರ್ ಎಚ್ ನೇಗಲಿ, ಎಲ್ ವೈ ರಾಯಪ್ಪಣ್ಣವರ, ಎಸ್ ಎಂ ತಲಬಟ್ಟಿ, ವಿ ಬಿ ಸಾಮ್ರಾಣಿ, ರಾಜು ಯಮನೂರ, ನಾಗೇಶ್ ಅಣ್ಣಿಗೇರಿ ಭಾಗಿಯಾಗಿದ್ರು..

Edited By :
Kshetra Samachara

Kshetra Samachara

14/03/2022 05:07 pm

Cinque Terre

19.31 K

Cinque Terre

0

ಸಂಬಂಧಿತ ಸುದ್ದಿ