ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ರಾಜ್ಯ ಮಟ್ಟದ ಪಗಡೆ ಸ್ಪರ್ಧೆಯಲ್ಲಿ ಗುಡೇನಕಟ್ಟಿ ತಂಡಕ್ಕೆ ಗೆಲುವು

ಕುಂದಗೋಳ: ಐತಿಹಾಸಿಕ ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದ ಮಾರುತಿ ಪಗಡೆ ಸಂಘವು ರಾಜ್ಯ ಮಟ್ಟದ ಹೊನಲು ಬೆಳಕಿನ ಪಗಡೆ ಸ್ಪರ್ಧೆ ಏರ್ಪಡಿಸಿ ಜನರ ಮನ ಗೆದ್ದಿದೆ.

ಕಳೆದ ಎರಡು ದಿನಗಳಿಂದ ಅಲ್ಲಾಪೂರ ಗ್ರಾಮದಲ್ಲಿ ನಡೆದ ರಾಜ್ಯ ಮಟ್ಟದ ಪಗಡೆ ಸ್ಪರ್ಧೆಯಲ್ಲಿ 31 ತಂಡಗಳು ಭಾಗವಹಿಸಿ ಗೆಲುವಿಗಾಗಿ ರಾತ್ರಿ ಇಡೀ ಪಗಡೆ ಹಾಕಿದವು. ಈ ಪೈಕಿ ಪ್ರಥಮ ಬಹುಮಾನವನ್ನು ಗುಡೇನಕಟ್ಟಿ ತಂಡ, ದ್ವಿತೀಯ ಬಹುಮಾನವನ್ನು ಕುರ್ತಕೋಟಿ ತಂಡ, ತೃತೀಯ ಬಹುಮಾನವನ್ನು ಬೆಟಗೇರಿ ತಂಡ, ಚತುರ್ಥ ಬಹುಮಾನವನ್ನು ಕುಂದಗೋಳ ತಂಡ ಪಡೆದುಕೊಂಡವು.

ಪಗಡೆ ಸ್ಪರ್ಧೆಯನ್ನು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ಜೆಡಿಎಸ್ ಅಭ್ಯರ್ಥಿ ಹಜರತ್ ಅಲಿ ಜೋಡಮನಿ ಉದ್ಘಾಟಿಸಿ ಪ್ರಥಮ ದ್ವಿತೀಯ ಬಹುಮಾನ ನೀಡಿದರೆ, ತೃತೀಯ ಬಹುಮಾನ ಎಮ್.ಎಸ್.ಅಕ್ಕಿ, ಚತುರ್ಥ ಬಹುಮಾನವನ್ನು ಸಿ.ಆರ್.ಫಿ.ಎಫ್ ಯೋಧ ಹಣುಮಂತಪ್ಪ ಭದ್ರಾಪೂರ ನೀಡಿದರು.

Edited By :
Kshetra Samachara

Kshetra Samachara

09/03/2022 01:17 pm

Cinque Terre

23.6 K

Cinque Terre

0

ಸಂಬಂಧಿತ ಸುದ್ದಿ