ಕುಂದಗೋಳ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ರಾಜ್ಯ ಮಟ್ಟದ ಟಗರಿನ ಕಾಳಗ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಶಿವಾನಂದ ಮಠದ ಮಲ್ಲಯ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ, ಹಜರತ್ ಅಲಿ ಜೋಡಮನಿ ಸ್ಪರ್ಧೆಗೆ ಚಾಲನೆ ನೀಡಿದರು.
ಬಳಿಕ ವೇದಿಕೆ ಕಾರ್ಯಕ್ರಮ ಆರಂಭಿಸಿ ಕುಂದಗೋಳ ತಾಲೂಕಿನ ಸರ್ವ ಮುಖಂಡರಿಗೆ ಸನ್ಮಾನ ಮಾಡಿ ಟಗರುಗಳನ್ನು ಕಾಳಗಕ್ಕೆ ಬಿಟ್ಟು ವಿದ್ಯುಕ್ತವಾಗಿ ಸ್ಪರ್ಧೆಗಳನ್ನು ಆರಂಭಿಸಲಾಯಿತು.
ಟಗರಿನ ಕಾಳಗದಲ್ಲಿ ಕುಂದಗೋಳ ತಾಲೂಕು ಸೇರಿದಂತೆ ರಾಜ್ಯಾದ್ಯಂತ ಟಗರು ಕಾಳಗದ ಪ್ರಿಯರು ತಮ್ಮ ತಮ್ಮ ಟಗರುಗಳನ್ನು ಸ್ಪರ್ಧೆಯ ಸೆಣಸಾಟಕ್ಕೆ ಕರೆ ತಂದಿದ್ದಾರೆ. ಬಹು ರೋಚಕ ಪಂದ್ಯಾವಳಿಗಳು ಆರಂಭವಾಗಿದ್ದು ಅಷ್ಟೇ ಕುತೂಹಲದಿಂದ ಕಾರ್ಯಕ್ರಮ ವೀಕ್ಷಿಸಲು ಜನಸಮೂಹ ಆಗಮಿಸಿದೆ.
Kshetra Samachara
05/03/2022 10:19 pm