ಹುಬ್ಬಳ್ಳಿ: ಟ್ವಿನ್ ಸಿಟಿ ಅಸೋಸಿಯೇಷನ್ ನೇತೃತ್ವದಲ್ಲಿ ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ ಬಾಕ್ಸ್ ಕ್ರಿಕೆಟ್ ಟೂರ್ನಾಮೆಂಟ್ ಆಲ್ ಸ್ಟಾರ್ ತಂಡದ ರೋಚಕ ಗೆಲುವಿನೊಂದಿಗೆ ಮುಕ್ತಾಯಗೊಂಡಿದೆ.
ಪಂದ್ಯಾವಳಿಯ ಕೊನೆಯ ಸೆಣಸಾಟ ಆಲ್ ಸ್ಟಾರ್ ಹಾಗೂ ವಿಎಂಸಿಸಿ ತಂಡದ ನಡುವೆ ನಡೆದಿದೆ. ಈ ತಂಡಗಳ ನಡುವಿನ ಹೋರಾಟದಲ್ಲಿ ಆಲ್ ಸ್ಟಾರ್ ತಂಡವು 69 ರನ್‌ಗಳ ಅಂತರದೊಂದಿಗೆ ವಿಎಂಸಿಸಿ ತಂಡವನ್ನು ಸೋಲಿಸಿದೆ. ಹೀಗಾಗಿ ಪಂದ್ಯಾವಳಿಯಲ್ಲಿ ವಿಎಂಸಿಸಿ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯ್ತು.
ಇನ್ನು ಟೂರ್ನಾಮೆಂಟ್ ಚಾಂಪಿಯನ್ ಆಗಿ ಹೊರಹೊಮ್ಮಿದ ಆಲ್ ಸ್ಟಾರ್ ತಂಡಕ್ಕೆ ಟ್ರೋಫಿ ನೀಡಿ ಆಟಗಾರರನ್ನು ಗೌರವಿಸಲಾಯಿತು.
ಸದ್ಯ ಈ ಟೂರ್ನಾಮೆಂಟ್ ಆಯೋಜಿಸಿ ನಿರೀಕ್ಷಿತ ಗೆಲುವು ಕಂಡ ಟ್ವಿನ್ ಸಿಟಿ ಸ್ಪೋರ್ಟ್ ಅಸೋಸಿಯೇಷನ್ ಪದಾಧಿಕಾರಿಗಳು ಮತ್ತೊಂದು ಟೂರ್ನಾಮೆಂಟ್ ಆಯೋಜಿಸಲು ಉತ್ಸುಕರಾಗಿದ್ದಾರೆ.
Kshetra Samachara
27/02/2022 04:46 pm