ಕುಂದಗೋಳ: ಒಬ್ಬರನ್ನು ಒಬ್ಬರು ಮಣಿಸುವ ಉತ್ಸಾಹ, ಮೈಯಲ್ಲಿ ಬೆವರು ಇಳಿದರೂ ಗೆಲ್ಲಬೇಕೆಂಬ ಛಲ, ಸುತ್ತ ಕೇಕೆ ಚಪ್ಪಾಳೆ ಸಿಳ್ಳೆಗಳ ಸದ್ದು, ನಡುವೆ ಉಸುಕು ತುಂಬಿದ ಆವರಣದಲ್ಲಿ ಕುಸ್ತಿಗಿಳಿದ ಪೈಲ್ವಾನರು. ಅಬ್ಬಾ! ಕುಸ್ತಿ ಪಂದ್ಯಾವಳಿ ಪೈಲ್ವಾನರು ನಿಜಕ್ಕೂ ಗ್ರೇಟ್ ಎನ್ನುವ ದೃಶ್ಯಗಳು.
ಇಂತಹ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದು, ಕುಂದಗೋಳ ತಾಲೂಕಿನ ಮೆತ್ತಿಗಟ್ಟಿ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಡೆದ ಕುಸ್ತಿ ಪಂದ್ಯಗಳನ್ನು ಶಾಸಕರಾದ ಕುಸುಮಾವತಿ ಶಿವಳ್ಳಿ ಅವರ ಮಗ ಅಮರಶಿವ ಶಿವಳ್ಳಿ ಉದ್ಘಾಟಿಸಿದರು.
ರಾಜ್ಯದ ಮೂಲೆ ಮೂಲೆಗಳಿಂದ ಮೆತ್ತಿಗಟ್ಟಿಗೆ ಆಗಮಿಸಿದ ಪೈಲ್ವಾನರು ರೋಚಕ ಪಂದ್ಯದಲ್ಲಿ ಗೆಲುವಿಗಾಗಿ ಸೆಣಸಾಟ ನಡೆಸಿದರು. ಈ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಕರಡಿಕೊಪ್ಪ ಪೈಲ್ವಾನ್, ದ್ವಿತೀಯ ಬಹುಮಾನವನ್ನು ಬಾಗಲಕೋಟೆ ಪೈಲ್ವಾನ್, ತೃತೀಯ ಬಹುಮಾನವನ್ನು ಬೆಳಗಾವಿ ಪೈಲ್ವಾನರು ಪಡೆದರು. ಕುಸ್ತಿ ಪಂದ್ಯಗಳನ್ನು ಮೆತ್ತಿಗಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಗುರು ಹಿರಿಯರು ಆಯೋಜಿಸಿ ಸುತ್ತ ಮುತ್ತಲಿನ ಹಳ್ಳಿಯ ಜನರ ಮೆಚ್ಚುಗೆಗೆ ಪಾತ್ರರಾದರು.
Kshetra Samachara
24/02/2022 05:58 pm