ಹುಬ್ಬಳ್ಳಿ: ಪಿಎಸ್ ರಾಯಲ್ ಚಾಲೆಂಜರ್ಸ್ ವಿರುದ್ಧ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿರುವ ಆರ್‌ಸಿ ಸೂಪರ್ ಸ್ಟಾರ್ ತಂಡವು, ಉಣಕಲ್ ಪ್ರೀಮಿಯರ್ ಲೀಗ್ (ಯುಪಿಎಲ್)ನ 2ನೇ ಆವೃತ್ತಿಯ ಟ್ರೋಫಿಗೆ ಮುತ್ತಿಟ್ಟಿದೆ.
ಹುಬ್ಬಳ್ಳಿಯ ಆರ್.ಕೆ ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ, ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಸಹಭಾಗಿತ್ವದಲ್ಲಿ ನಡೆದ ಯುಪಿಎಲ್-2 ಟೂರ್ನಿಯುದ್ದಕ್ಕೂ ಆರ್‌ಸಿ ಸೂಪರ್ ಸ್ಟಾರ್ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತ್ತು. ಭಾನುವಾರ (ಫೆ.6ರಂದು) ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಿಎಸ್ ರಾಯಲ್ ಚಾಲೆಂಜರ್ಸ್ ತಂಡವು ನಿಗದಿತ 10 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 81 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಆರ್‌ಸಿ ಸೂಪರ್ ಸ್ಟಾರ್ ತಂಡವು 7 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 83 ರನ್ ದಾಖಲಿಸಿ ಗೆದ್ದು ಬೀಗಿದೆ.
ಈ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ರಮೇಶ್ ಬೆಂಗೇರಿ ಪಂದ್ಯ ಶ್ರೇಷ್ಠಕ್ಕೆ ಪಾತ್ರರಾದರು. ಅವರು 2 ಓವರ್ ಬೌಲಿಂಗ್ ಮಾಡಿ 14 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/02/2022 05:58 pm