ಹುಬ್ಬಳ್ಳಿ: ಉಣಕಲ್ ಪ್ರೀಮಿಯರ್ ಲೀಗ್ (ಯುಪಿಎಲ್)ನ 2ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ರಾಯಲ್ ಟೈಗರ್ ಹಾಗೂ ಆರ್‌ಸಿ ಸೂಪರ್ ಸ್ಟಾರ್ಸ್ ತಂಡಗಳು ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿವೆ.
ಹುಬ್ಬಳ್ಳಿಯ ಆರ್.ಕೆ ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿರುವ, ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಯುಪಿಎಲ್-2 ಟೂರ್ನಿಯ ಲೀಗ್ ಹಂತದ ಇಂದಿನ ಪಂದ್ಯಗಳು ವಿವಿಧ ಹ್ಯಾಟ್ರಿಕ್‌ಗಳಿಗೆ ಸಾಕ್ಷಿಯಾಗಿವೆ. ರಾಯಲ್ ಟೈಗರ್ ಹಾಗೂ ಆರ್‌ಸಿ ಸೂಪರ್ ಸ್ಟಾರ್ಸ್ ತಂಡಗಳು ಹ್ಯಾಟ್ರಿಕ್ ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿವೆ. ಅಷ್ಟೇ ಅಲ್ಲದೆ ರಾಯಲ್ ಟೈಗರ್‌ನ ಬ್ಯಾಟರ್ ಉಮರ್ ಅಮ್ಮು ಹಾಗೂ ಆರ್‌ಸಿ ಸೂಪರ್ ಸ್ಟಾರ್ಸ್ ತಂಡದ ಆಟಗಾರ ಸಂಗಮೇಶ್ ಎಸ್.ಐ ಸತತ ಮೂರು ಪಂದ್ಯಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡ ಸಾಧನೆ ಮಾಡಿದ್ದಾರೆ.
ಮೊದಲ ಪಂದ್ಯ:
ಯುಪಿಎಲ್-2 ಟೂರ್ನಿಯ ಮೂರನೇ ದಿನದ ಮೊದಲ ಪಂದ್ಯದಲ್ಲಿ ಲಯನ್ ಕಿಂಗ್ಸ್ ತಂಡದ ವಿರುದ್ಧ ರಾಯಲ್ ಟೈಗರ್ಸ್ ತಂಡವು ೬ ವಿಕೆಟ್‌ಗಳಿಂದ ಗೆದ್ದು ಬೀಗಿದೆ.
ಸ್ಕೋರ್ ವಿವರ:
ಲಯನ್ ಕಿಂಗ್ಸ್; 85/8 (10 ಓವರ್)
ರಾಯಲ್ ಟೈಗರ್ಸ್: 86/4 (8.4 ಓವರ್)
ಪಂದ್ಯ ಶ್ರೇಷ್ಠ: ಉಮರ್ ಅಮ್ಮು (30 ಎಸೆತ, 1 ಬೌಂಡರಿ, 6 ಸಿಕ್ಸ್, 53 ರನ್)
ಎರಡನೇ ಪಂದ್ಯ:
ಯುಪಿಎಲ್-2 ಟೂರ್ನಿಯ ಮೂರನೇ ದಿನದ ಮೊದಲ ಪಂದ್ಯದಲ್ಲಿ ಬಾಲಾಜಿ ಬ್ಲಾಸ್ಟರ್ಸ್ ತಂಡದ ವಿರುದ್ಧ ಆರ್‌ಸಿ ಸೂಪರ್ ಸ್ಟಾರ್ಸ್ ತಂಡವು 31 ರನ್‌ಗಳಿಂದ ಗೆದ್ದು ಬೀಗಿದೆ.
ಸ್ಕೋರ್ ವಿವರ:
ಬಾಲಾಜಿ ಬ್ಲಾಸ್ಟರ್ಸ್; 85/8 (10 ಓವರ್)
ಆರ್‌ಸಿ ಸೂಪರ್ ಸ್ಟಾರ್ಸ್: 86/4 (8.4 ಓವರ್)
ಪಂದ್ಯ ಶ್ರೇಷ್ಠ: ಸಂಗಮೇಶ್ ಎಸ್.ಐ (14 ಎಸೆತ, 5 ಬೌಂಡರಿ, 2 ಸಿಕ್ಸ್, 32 ರನ್) ಹಾಗೂ (3 ಓವರ್, 22 ರನ್ ನೀಡಿ, 3 ವಿಕೆಟ್ ಪಡೆದಿದ್ದಾರೆ).
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/02/2022 06:05 pm