ನವಲಗುಂದ: ಪಟ್ಟಣದ ಶ್ರೀ ಶಂಕರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಬೆಂಗಳೂರು, ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 19 ವರ್ಷದೊಳಗಿನ ಅಂತರ್ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ದಾವಣಗೆರೆ ತಂಡ ವಿಜಯಗಳಿಸಿದೆ. ನವಲಗುಂದದ ಶಂಕರ ಪದವಿ ಪೂರ್ವ ಮಹಾ ವಿದ್ಯಾಲಯ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ.
ಇನ್ನು ಪ್ರಾಚಾರ್ಯರಾದ ಜಯರಾಮ ಲಮಾಣಿ, ಪ್ರೊ. ಆರ್.ಪಿ. ಚೌಹಾನ, ಉಪನ್ಯಾಸಕರಾದ ಬಿ. ಹೆಚ್.ಹೂಗಾರ, ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ನ ಶ್ರೀಕಾಂತ ಅವರು ಬಹುಮಾನ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಎಲ್ಲಾ ಆಟಗಾರರಿಗೆ ಬಹುಮಾನ ವಿತರಿಸಿ ಶುಭಕೋರಿದರು.
Kshetra Samachara
01/02/2022 09:46 pm