ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗಾಗಿ 2 ದಿನಗಳ ಸೌಹಾರ್ದ್ ಟೋರ್ನಿಗೆ ಚಾಲನೆ ದೊರಕಿತು.
ಇಂದು ಬೆಳಿಗ್ಗೆ ನಗರದ ದೇಶಪಾಂಡೆ ನಗರದ ಜಿಮಖಾನ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕೆಎಸ್‌ಸಿಎ ಧಾರವಾಡ ವಲಯ ಅಧ್ಯಕ್ಷ, ಪಾಲಿಕೆ ಸದಸ್ಯ ವೀರಣ್ಣ ಸವಡಿ ಹಾಗೂ ಹುಬ್ಬಳ್ಳಿ-ಧಾರವಾಡ ಕ್ರೀಡೆ ಅಧ್ಯಕ್ಷ ಸಾಜೀದ್ ಪಾರಾಷ್ ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಇನ್ನು ಪಂದ್ಯಾವಳಿಯಲ್ಲಿ 13 ತಂಡಗಳು ಪಾಲ್ಗೊಂಡಿವೆ.
ಪ್ಯಾಕೇಜ್ ತಂಡ ಹಾಗೂ ಕ್ಯಾಪ್ಶನ್ ಇಲೆವೆನ್ ನಡುವಿನ ಪಂದ್ಯವು ರೋಚಕ ತಿರುವು ಪಡೆದುಕೊಂಡಿತು. ಸೂಪರ್ ಓವರ್‌ನಲ್ಲಿ ಪ್ಯಾಕೇಜ್ ತಂಡದ ವಿರುದ್ಧ ಕ್ಯಾಪ್ಶನ್ ಇಲೆವೆನ್ ತಂಡ 6 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪ್ಯಾಕೇಜ್ ತಂಡವು 8 ವಿಕೆಟ್ ನಷ್ಟಕ್ಕೆ 52 ರನ್ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಕ್ಯಾಪ್ಶನ್ ಇಲೆವನ್ 9 ವಿಕೆಟ್ ಕಳೆದುಕೊಂಡು 8 ಓವರ್‌ಗಳಲ್ಲಿ 52 ರನ್ ಗಳಿಸಿತು. ಪ್ಯಾಕೇಜ್ ತಂಡದ ಕ್ಯಾಪ್ಟನ್ ಯಲ್ಲಪ್ಪ ಕುಂದಗೋಳ, ಉಪನಾಯಕ ಈರಣ್ಣ ವಾಲಿಕಾರ,ವಿನಾಯಕ್ ರೆಡ್ಡಿ, ಮಂಜು ಉತ್ತಮ ಬೌಲಿಂಗ್ ಮಾಡಿದರು.
ಡ್ರಾ ಆದ ಪಂದ್ಯ ಮಿನಿ ಸೂಪರ್ ಓವರ್ ಆಡಿಸಲು ನಿರ್ಣಾಯಕರು ನಿರ್ಧರಿಸಿದರು. ಕ್ಯಾಫ್ಶನ್ ತಂಡ ನಿಗದಿತ 3 ಬಾಲ್‌ಗಳಲ್ಲಿ 7 ರನ್ ಕಲೆಹಾಕಿತು. ಆದರೆ ಪ್ರತಿಯಾಗಿ ಕಣಕ್ಕಿಳಿದ ಫ್ಯಾಕೆಜ್ ಒಂದು ವಿಕೆಟ್ ಕಳೆದುಕೊಂಡು 2 ರನ್ ಗಳಿಸಲು ಮಾತ್ರ ಶಕ್ತವಾಯಿತು. ಕ್ಯಾಫ್ಶನ್ ಇಲೆವೆನ್ ಪರ ರವೀಂದ್ರ ಹಳಜೋಳ ಪಂದ್ಯದ ಗತಿ ಬದಲಿಸಿದರು.
Kshetra Samachara
11/01/2022 01:01 pm