ಹುಬ್ಬಳ್ಳಿ: ಅವರೆಲ್ಲರೂ ದಿನವೂ ಖಾಕಿ ಬಟ್ಟೆ ಧರಿಸಿಕೊಂಡು ಸಾರ್ವಜನಿಕ ಸೇವೆಗೆ ನಿಲ್ಲುತ್ತಿದ್ದವರು. ಇಂದು ಮಾತ್ರ ಕ್ರೀಡಾಂಗಣದಲ್ಲಿ ಕ್ರೀಡಾ ಕೂಟದಲ್ಲಿ ಮಿಂಚುತ್ತಿದ್ದಾರೆ. ಹಾಗಿದ್ದರೇ ಯಾರು ಆ ಸಾರ್ವಜನಿಕ ಸೇವಕರು...? ಅವರು ಮಾಡುತ್ತಿರುವುದಾದರೂ ಏನು ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್...
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ಪೊಲೀಸರು ಅಂದರೆ ನಿಜಕ್ಕೂ ಒಂದು ಗತ್ತು ಇದ್ದೆ ಇದೆ. ಅಲ್ಲದೇ ಸಾಕಷ್ಟು ಜನಪರ ಕಾರ್ಯಗಳ ಮೂಲಕ ಜನಮನ್ನಣೆ ಪಡೆದ ಹುಬ್ಬಳ್ಳಿ ಧಾರವಾಡ ನಗರ ಪೋಲೀಸರು ಇಂದು ತಮ್ಮ ಇಲಾಖೆಯಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಕೂಟದಲ್ಲಿ ಕ್ರೀಡೆಗಳನ್ನು ಆಡಲು ಮುಂದಾಗಿದ್ದಾರೆ. ಹೌದು.. ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಾಲಯ ಘಟಕದಿಂದ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಪೊಲೀಸ್ ಸಿಬ್ಬಂದಿ ಪಥ ಸಂಚಲನ ಹಾಗೂ ಕ್ರೀಡಾ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.
ಇನ್ನೂ ಪೊಲೀಸ್ ಕ್ರೀಡಾಕೂಟಕ್ಕೆ ಉದ್ಘಾಟಕರಾಗಿ ಬಂದಿದ್ದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಉಮೇಶ ಅಡಿಗ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಇದೇ ವೇಳೆ ಗೌರವಾನ್ವಿತ ಅತಿಥಿಗಳಿಗೆ ಹಾಗೂ ಅಧಿಕಾರಿಗಳಿಗೆ ಪೊಲೀಸ್ ಪಡೆಗಳು ಗೌರವ ಸಲ್ಲಿಸಿದರು.
ಒಟ್ಟಿನಲ್ಲಿ ಮೊದಲ ದಿನವಾದ ಇಂದು ಹುಬ್ಬಳ್ಳಿಯ ಸಿಎಆರ್ ಮೈದಾನದಲ್ಲಿ ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟಕ್ಕೆ ಮುನ್ನುಡಿ ಬರೆಯಲಾಗಿದ್ದು, ದಿನವೂ ಒತ್ತಡದ ಬದುಕಿನಲ್ಲಿದ್ದ ಪೊಲೀಸರು ರಿಲ್ಯಾಕ್ಸ್ ಮೈಂಡ್ ನಲ್ಲಿ ಆಟ ಆಡಲು ಮುಂದಾಗಿರುವುದು ವಿಶೇಷವಾಗಿದೆ.
Kshetra Samachara
04/01/2022 11:54 am