ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಇಂಡಿಯಾ ಪಾಕ್ ಪಂದ್ಯಕ್ಕೆ ಅಲ್ ದ ಬೆಸ್ಟ್ ಹೇಳಿದ ಪೋರರು.

ಧಾರವಾಡ : ಕುತೂಹಲ ಕೆರಳಿಸಿದ್ದ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿಗೆ ಈಗಾಗಲೇ ದೇಶ ಸೇರಿದಂತೆ ಜಗತ್ತಿನೆಲ್ಲಡೆ ಅಭಿಮಾನಿಗಳು ಅವರದೇ ರೀತಿಯಲ್ಲಿ ವಿಶ್ ಮಾಡುತ್ತಿದ್ದು ಪೇಡಾನಗರಿ ಧಾರವಾಡದಲ್ಲಿ ವಿದ್ಯಾರ್ಥಿಗಳು ಗೆದ್ದು ಬಾ ಭಾರತ ಎಂದು ವಿಶ್ ಮಾಡುವುದರ ಮೂಲಕ ಭಾರತಕ್ಕೆ ತಂಡಕ್ಕೆ ಶುಭಕೋರಿದ್ದಾರೆ.

ನಗರದ ಪವನ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿಗಳು ಕ್ರಿಕೆಟ್ ಸಾಮಗ್ರಿಗಳನ್ನು ಹಿಡಿದು ಪ್ರಾಕ್ಟೀಸ್ ಮಾಡುವ ಸ್ಥಳದಿಂದಲೇ ರಾಷ್ಟ್ರ ಧ್ವಜವನ್ನು ಹಿಡಿದು ಗೆದ್ದು ಬಾ ಭಾರತ, ಆಲ್ ದ ಬೆಸ್ಟ್ ಇಂಡಿಯಾ ಎಂದು ಜಯಘೋಷಗಳನ್ನು ಕೂಗುವದರ ಮೂಲಕ ಪಾಕಿಸ್ತಾನದ ವಿರುದ್ಧ ಗೆಲುವು ನಿಮ್ಮದಾಗಲಿ ಎಂದು ವಿದ್ಯಾರ್ಥಿಗಳು ಭಾರತದ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಭಾರತ-ಪಾಕ್ ನಡುವೆ ಯಾವುದೇ ಪಂದ್ಯ ನಡೆಯದೆ ಇರುವ ಕಾರಣದಿಂದಾಗಿ ಪ್ರಸ್ತುತ ನಡೆಯುತ್ತಿರುವ ಟಿ-20 ವರ್ಲ್ಡ್ ಕಪ್ ನಲ್ಲಿ ಇಂಡೋ ಪಾಕ್ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.

ಅಷ್ಟೇ ಅಲ್ಲದೆ ಇಂದು ಮುಖಾಮುಖಿಯಾಗಲಿರುವ ಭಾರತ ಪಾಕಿಸ್ತಾನ ಪಂದ್ಯ ವೀಕ್ಷಣೆಗೆ ಪೇಡಾನಗರಿ ಧಾರವಾಡದ ಯುವ ಸಮುದಾಯ ಸೇರಿದಂತೆ ಎಲ್ಲಾ ವಯೋಮನದವ್ರು ಕಾತುರದಿಂದ ಪಂದ್ಯ ಆರಂಭಕೆ ಎದುರು ನೋಡುತ್ತಿದ್ದು, ಅವರದೇ ಆದ ರೀತಿಯಲ್ಲಿ ಭಾರತ ತಂಡಕ್ಕೆ ವಿಶ್ ಮಾಡುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

24/10/2021 05:48 pm

Cinque Terre

29.34 K

Cinque Terre

0

ಸಂಬಂಧಿತ ಸುದ್ದಿ