ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಗಳಗಿ ಹುಲಕೊಪ್ಪ ಗ್ರಾಮದಲ್ಲಿ ರಾಜ್ಯಮಟ್ಟದ ಹತ್ತು ಕಿಲೋ ಮೀಟರ್ ಮ್ಯಾರಥಾನ್ ಉದ್ಘಾಟನೆ

ಕಲಘಟಗಿ: ತಾಲೂಕಿನ ಗಳಗಿ ಹುಲಕೊಪ್ಪದಲ್ಲಿ ಯುವ ಕೇಸರಿ ಗೆಳೆಯರ ಬಳಗದ ವತಿಯಿಂದ ದಸರಾ ಹಬ್ಬದ ನಿಮಿತ್ತ ರಾಜ್ಯಮಟ್ಟದ ಹತ್ತು ಕಿಲೋಮೀಟರ್ ಮ್ಯಾರಥಾನ್ ಸ್ಪರ್ಧೆಯನ್ನು ಭಾನುವಾರ ಆಯೋಜಿಸಲಾಗಿತ್ತು.

ಸ್ಪರ್ಧೆಯ ಉದ್ಘಾಟನೆಯನ್ನು ದೈಹಿಕ ಉಪನ್ಯಾಸಕ ಆರ್ ಬಿ ಚವ್ಹಾಣ ಹಾಗೂ ರಾಷ್ಟ್ರೀಯ ಕ್ರೀಡಾಪಟು ಮೈಲಾರ್ ಕಮತರ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.

ಸ್ಪರ್ಧೆಯಲ್ಲಿ ಹುಬ್ಬಳ್ಳಿ-ಧಾರವಾಡ, ಮಂಡ್ಯ,ಮೈಸೂರು, ಜಮಖಂಡಿ,ಹಾವೇರಿ,ಕಾರವಾರ,ಮಂಗಳೂರು,ಬೆಳಗಾವಿ ಸೇರಿದಂತೆ ರಾಜ್ಯದ

ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗವಹಿಸಿ ಗಮನ ಸೆಳೆದರು.

ಈರಯ್ಯ ಸಿದ್ದಾಪುರಮಠ,ಸುರೇಶ್ ಮಂಜರಗಿ, ಶಿವಪೂಜಯ್ಯ ತಡಸಮಠ,ಆರ್ ಬಿ ಚವ್ಹಾಣ,ಸಿದ್ದಪ್ಪ ಶಿವನೂರ,ಆರ್ ಕೆ ಪಟಾದರ,ವಿನಾಯಕ ದವನೆ,ಎಮ್ ಎಸ್ ಪಾಟೀಲ,ಮಾಂತೇಶ ಬಳ್ಳಾರಿ,ಸಚಿನ್ ಪವಾರ,ನಿವೃತ್ತ ಸೈನಿಕರು,ಹಿರಿಯರ,ಯುವ ಕೇಸರಿ ಗೆಳೆಯರ ಬಳಗದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Edited By : Nagesh Gaonkar
Kshetra Samachara

Kshetra Samachara

17/10/2021 09:30 pm

Cinque Terre

87.72 K

Cinque Terre

0

ಸಂಬಂಧಿತ ಸುದ್ದಿ