ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮೊಬೈಲ್ ಗೇಮ್ ಕ್ರೇಜ್'ಗೆ ಗುಡ್ ಬೈ ಹೇಳಿ ಮೈದಾನಕ್ಕೆ ಬನ್ನಿ ಯುವಕರೇ !

ಕುಂದಗೋಳ : ತಾಲೂಕಿನ ರೂಟ್ಟಿಗವಾಡ ಗ್ರಾಮದ ಕ್ರಾಂತಿಕಾರಿ ಭಗತಸಿಂಗ್ ಮಂಡಳದ ಯುವಕರು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಯುವಕರಲ್ಲಿನ ಮೊಬೈಲ್ ಗೇಮ್ ಕ್ರೇಜ್'ಗೆ ಪುಲ್ ಸ್ಟಾಪ್ ಇಟ್ಟು ಹೊಸ ಕ್ರೀಡಾ ಪ್ರೇಮ ಬೆಳೆಸಲು ಮುಂದಾಗಿದ್ದಾರೆ.

ಭಗತ್ ಸಿಂಗ್ ಯುವಕ ಮಂಡಳದವರು ಇಂದು ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಯುವ ನಾಯಕರಾದ ಎಸ್.ಎಪ್ ನಿರಂಜನಗೌಡ್ರ ಕ್ರಿಕೆಟ್ ಆಡುವ ಮೂಲಕ ಚಾಲನೆ ನೀಡಿ

ಮಾತನಾಡಿ ಯುವಕರು ದುಶ್ಚಟಗಳಿಂದ ದೂರವಿದ್ದು

ದೈಹಿಕ ಮಾನಸಿಕ ಕ್ರೀಡಾ ಮನೋಭಾವನೆ ಬೆಳೆಸಿಕೊಂಡು ಓಲಿಂಪಿಕ್ಸ್'ಗೆ ಪಾದಾರ್ಪಣೆ ಮಾಡುವ ಮಟ್ಟಿಗೆ ಶ್ರಮ ಪಟ್ಟು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದರು.

ಕುಂದಗೋಳ ತಾಲೂಕಿನ ವಿವಿಧ ಹಳ್ಳಿಗಳ ಯುವಕರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಶಸ್ತಿಗಾಗಿ ಪೈಪೊಟಿ ನಡೆಸುತ್ತಿದ್ದು ರೊಟ್ಟಿಗವಾಡದ ಕ್ರಿಕೆಟ್ ಮೈದಾನದಲ್ಲಿ ಮಿನಿ ಐಪಿಎಲ್ ಸಮರದ ಕನ್ನಡ ಭಾಷೆ ಕಾಮೆಂಟರಿ ಜೋರಾಗಿದೆ.

Edited By :
Kshetra Samachara

Kshetra Samachara

10/10/2021 04:01 pm

Cinque Terre

46.82 K

Cinque Terre

2

ಸಂಬಂಧಿತ ಸುದ್ದಿ