ಹುಬ್ಬಳ್ಳಿ- ಟೋಕಿಯೊ ಒಲಿಂಪಿಕ್ಸ್‌ನಲ್ಲಿ, ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಜಯಿಸಿದ ಹಿನ್ನೆಲೆಯಲ್ಲಿ, ಮನೆಗೊಬ್ಬರಂತೆ ಹಾಕಿ ಆಟಗಾರರನ್ನು ಹೊಂದಿರುವ ಸೆಟ್ಲಿಮೆಂಟ್‌ನಲ್ಲಿ, ನಗರದ ಸೆಟ್ಲಿಮೆಂಟ್ ಮೈದಾನದಲ್ಲಿ ಹುಬ್ಬಳ್ಳಿ ಹಾಕಿ ಅಕಾಡೆಮಿ ತಂಡದವರು, ಮಾಜಿ ಹಾಗೂ ಹಾಲಿ ಆಟಗಾರರು, ಕೋಚ್‌ಗಳು ಮೈದಾನದ ಮುಂಭಾಗದ ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚುವುದರ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಹಾಕಿ ಆಟಗಾರರಾದ ವಾಸು ಗೋಕಾಕ, ರಾಮು ಭಜಂತ್ರಿ, ದೇವು ಭಜಂತ್ರಿ, ರಾಜೇಶ್ ಮನಪಾಟಿ, ಸುನೀಲ್ ಜಾಧವ್ ಸೇರಿದಂತೆ ಮುಂತಾದವರು ಇದ್ದರು.
Kshetra Samachara
05/08/2021 05:19 pm