ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಐಪಿಎಲ್ ಮಾದರಿಯಲ್ಲಿ ಆಯೋಜನೆ ಮಾಡಲಾಗಿದ್ದ ಉಣಕಲ್ ಪ್ರೀಮಿಯರ್ ಲೀಗ್ ಅಂತಿಮ ಘಟವನ್ನು ತಲುಪಿದ್ದು,ಪೈನಲ್ ಮ್ಯಾಚ್ ನಲ್ಲಿ ಸೆಣಸಾಡಿದ ಬಾಲಾಜಿ ಬ್ಲಾಸ್ಟರ್ ಹಾಗೂ ಲಖನ್ ಡ್ರ್ಯಾಗನ್ ತಂಡದ ರೋಮಾಂಚನಕಾರಿ ಪಂದ್ಯದಲ್ಲಿ ಬಾಲಾಜಿ ಬ್ಲಾಸ್ಟರ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ರನ್ನರ್ ಅಫ್ ಆಗಿ ಲಖನ್ ಡ್ರ್ಯಾಗನ್ ತಂಡ ಹೊರಹೊಮ್ಮಿದ್ದು,ಈ ಆಟದಲ್ಲಿ ಭಾಗವಹಿಸಿದ ಎಂಟು ತಂಡಗಳು ಉತ್ತಮವಾಗಿ ಆಟವನ್ನು ಪ್ರದರ್ಶಿಸುವ ಮೂಲಕ ಯುಪಿಎಲ್ ಯಶಸ್ವಿಗೊಳಿಸಿದರು.
ಉಣಕಲ್ ಪ್ರೀಮಿಯರ್ ಲೀಗ್ ನಲ್ಲಿ ಉಣಕಲನ ಏಂಟು ತಂಡಗಳು ಭಾಗವಹಿಸಿದ್ದು,ಐಪಿಎಲ್ ಫಾರ್ಮೆಟ್ ನಲ್ಲಿಯೇ ಆಟವನ್ನು ಆಡಿಸಲಾಗಿರುವುದು ವಿಶೇಷವಾಗಿದೆ. ಇನ್ನೂ ಆರ್.ಕೆ.ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ ಆಯೋಜನೆ ಮಾಡಿರುವ ಯುಪಿಎಲ್ ಈಗ ಉತ್ಸಾಹಿ ಯುವ ಆಟಗಾರರಿಗೆ ಹುಮ್ಮಸ್ಸು ನೀಡದಂತಾಗಿದೆ. ಆರ್.ಕೆ.ಟೈಗರ್ಸ್ ಅಧ್ಯಕ್ಷ ರಮೇಶ ಕಾಂಬಳೆ ನೇತೃತ್ವದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಉತ್ತಮ ರೀತಿಯಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡಿತು.
ಇಂದು ವಿಜೇತ ತಂಡವಾದ ಬಾಲಾಜಿ ಬ್ಲಾಸ್ಟರ್ ತಂಡಕ್ಕೆ ಬಹುಮಾನ ನೀಡಿ ಗೌರವಿಸಲಾಯಿತು. ಇದೇ ವೇಳೆ ರನ್ನರ್ ಅಪ್ ತಂಡ ಲಖನ್ ಡ್ರ್ಯಾಗನ್ ಗೂ ಬಹುಮಾನ ವಿತರಣೆ ಮಾಡಿದ್ದು,ಉತ್ತಮ ಬ್ಯಾಟ್ಸ್ ಮನ್, ಉತ್ತಮ ಬೌಲರ್ ಹಾಗೂ ಮ್ಯಾನ್ ಆಫ್ ದಿ ಮ್ಯಾಚ್ ಪುರಸ್ಕಾರ ನೀಡಿ ಗೌರವಿಸಲಾಯಿತು.
Kshetra Samachara
15/02/2021 09:59 pm