ಕುಂದಗೋಳ : ಎ.6 ರಿಂದ ಚಾಕಲಬ್ಬಿ ಗ್ರಾಮದೇವತೆ ಕಳಸದ ಗೋವಿಂದಭಟ್ಟರು ಸಂತ ಶಿಶುನಾಳ ಶರೀಫರಿಗೆ ಚಿಲುಮೆ ನೀಡಿ ಹೆಸರಾದ ತಾಯಿ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ನೆರವೇರಲಿದ್ದು ಜಾತ್ರಾ ನಿಮಿತ್ತವಾಗಿ ಆಯೋಜಿಸಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನೋಡುಗರ ಮನ ಗೆದ್ದಿವೆ.
ಹೌದು ! ಚಾಕಲಬ್ಬಿ ಗ್ರಾಮದಲ್ಲಿ ಶ್ರೀ ರೇಣುಕಾದೇವಿ ಸ್ಪೋರ್ಟ್ ಕ್ಲಬ್ ದಿವಂಗತ ಅಶೋಕ್ ನಾವಿ ಗುರುಗಳ ಸ್ಮರಣಾರ್ಥವಾಗಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯಾದ್ಯಂತ ಕಬಡ್ಡಿ ಕ್ರೀಡಾಪಟುಗಳು ಭಾಗವಹಿಸಿ ಪ್ರಶಸ್ತಿ ಸುತ್ತಿಗಾಗಿ ತೀವ್ರ ಪೈಪೋಟಿ ನಡೆಸಿದರು.
ಕೊನೆಯ ಸುತ್ತಿನವರೆಗೂ ರೋಚಕ ಎನಿಸುವ ಕಬಡ್ಡಿ ಪಂದ್ಯಾವಳಿಯಲ್ಲಿ ಮೊದಲ ಬಹುಮಾನ 20 ಸಾವಿರ ರೂಪಾಯಿ ನವ ಕರ್ನಾಟಕ ಯುವಕರು ತಂಡ ಗುಡಗೇರಿ, ದ್ವಿತೀಯ ಬಹುಮಾನ 15 ಸಾವಿರ ಜಯ ಕರ್ನಾಟಕ ತಂಡ ಮೆಣಸಗಿ, ತೃತೀಯ ಬಹುಮಾನ 10 ಸಾವಿರ ಶ್ರೀ ರೇಣುಕಾದೇವಿ ತಂಡ ಚಾಕಲಬ್ಬಿ, ಚತುರ್ಥ ಬಹುಮಾನ ಚಿರಂಜೀವಿ ತಂಡ ಮಲ್ಲಿಗವಾಡ ಪಡೆದು ವಿಜಯದ ನಗೆ ಬೀರಿದರು.
Kshetra Samachara
05/04/2022 09:01 pm