ಆಕೆ ಪುಟ್ಟ ಬಾಲಕಿ. ಆಟ ಆಡುವ ವಯಸ್ಸಿನಲ್ಲೇ ಸಾಧನೆ ಮಾಡಿ ಎಲ್ಲರ ಗಮನ ಸೆಳೆಯಲು ಮುಂದಾಗಿದ್ದಾಳೆ. ಅಷ್ಟಕ್ಕೂ ಈ ಪೋರಿಯ ಸಾಧನೆ ಏನು? ಎಂಬುದನ್ನು ನೋಡೋಣ ಬನ್ನಿ...
ಹೀಗೆ ಅಮ್ಮನೊಂದಿಗೆ ಮುಗುಳ್ನಗೆ ಬೀರುತ್ತಾ ನಿಂತಿರುವ ಈ 4ರ ಹರೆಯದ ಬಾಲಕಿ ಹೆಸರು ಅಭಿಗೆಲ್ ಬಿಪಿನ್ ರಾಜಕುಮಾರ ಗೌಡ. ಹುಬ್ಬಳ್ಳಿ ಶಾಂತಿ ನಗರದ ಹಳ್ಯಾಳ ಲೇಔಟ್ ನಿವಾಸಿ. ಚಿಕ್ಕ ವಯಸ್ಸಿನಲ್ಲೇ ಕ್ರೀಡೆಯಲ್ಲಿ ಉತ್ಸಾಹ ಹೊಂದಿರುವುದನ್ನು ಗಮನಿಸಿದ ಪೋಷಕರು, ಆಕೆಯನ್ನು ಸ್ವಿಮ್ಮಿಂಗ್ ಕ್ಲಾಸ್ ಗೆ ಸೇರಿಸಿದ್ರು.
75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ, ಬೆಳಗಾವಿಯಲ್ಲಿ ಅಬ್ಬಾ ಸ್ಪೋರ್ಟ್ಸ್ ಕ್ಲಬ್ ಹಾಗೂ ಹಿಂದ್ ಸೊಸೈಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಬೆಳಗಾಂ ಹಮ್ಮಿಕೊಂಡಿದ್ದ ಕಿಕ್ ಬೋರ್ಡ್ ಸ್ವಿಮ್ಮಿಂಗ್ ಕಾಂಪಿಟೇಶನ್ ನಲ್ಲಿ ಭಾಗವಹಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. 25 ಮೀಟರ್ ದೂರವನ್ನು ಕೇವಲ 41 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈ ಸ್ಪರ್ಧೆಯಲ್ಲಿ 17 ಜಿಲ್ಲೆಗಳ ಶಾಲಾ ಮಕ್ಕಳು ಭಾಗವಹಿಸಿದ್ದರು.
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/08/2022 12:51 pm