ಧಾರವಾಡ: ಆಕೆ ಸಾರಿಗೆ ನೌಕರನ ಮಗಳು.. ಎಲ್ಲರಂತೆ ಆಕೆಯೂ ಸಹ ಕಾಲೇಜು, ಅಭ್ಯಾಸ, ತಾನಾಯ್ತು ತನ್ನ ಕೆಲಸ ಆಯ್ತು ಅಂತಿದ್ರೆ ಹೇಗೋ ಆಕೆಯೂ ಸಹ ವಿದ್ಯಾರ್ಥಿ ಜೀವನವನ್ನ ಅಂತ್ಯಗೊಳಿಸುತ್ತಿದ್ದಳು.. ಆದ್ರೆ ಆಕೆ ಮಾಡಿದ ಆ ಸಾಧನೆ ಇದೀಗ ಭಾರತದ ಭರವಸೆಯ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾಳೆ.. ಯಾರು ಆಕೆ. ಆಕೆ ಮಾಡಿದ ಸಾಧನೆಯಾದ್ರು ಏನು ಗೊತ್ತಾ..ಈ ಸ್ಟೋರಿ ನೋಡಿ..
ಸಾಧನೆ ಮಾಡಬೇಕು ಅಂದ್ರೆ ಯಾರ ಹಂಗೂ ಬೇಕಿಲ್ಲ ಅನ್ನೋದಕ್ಕೆ ಈ ಯುವತಿಯೇ ಉದಾಹರಣೆಯಾಗಿದ್ದಾಳೆ.. ಧಾರವಾಡದ ಈ ಯುವತಿ ಇದೀಗ ಇಡೀ ಭಾರತವೇ ಹೆಮ್ಮೆ ಪಡುವಂತೆ ತನ್ನ ಆಟ ಪ್ರದರ್ಶಿಸಿ ಭಾರತಕ್ಕೆ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾಳೆ.. ಧಾರವಾಡದ ತಾಲೂಕಿನ ಮುಗಳಿ ಗ್ರಾಮದ ಪ್ರಿಯಾಂಕಾ ಓಲೆಕಾರ್ ಫ್ರಾನ್ಸ್ನಲ್ಲಿ ನಡೆದ ರೀಲೆ ಓಟದಲ್ಲಿ ಕಂಚಿನ ಪದಕಕ್ಕೆ ಮತ್ತಿಕ್ಕಿದ್ದಾಳೆ.. ಓಟದಲ್ಲೇ ಸದಾ ಮುಂದಿದ್ದ ಪ್ರಿಯಾಂಕಾ ಹಾಸ್ಟೆಲ್ನಲ್ಲಿಯೇ ವಿದ್ಯಾಭ್ಯಾಸದ ಜೊತೆಗೆ ಆಟದಲ್ಲೂ ಸಹ ಮುಂದಿದ್ದಳು. ಹೀಗಾಗಿಯೇ ಭುವನೇಶ್ವರದಲ್ಲಿ ನಡೆದ ಸೆಲೆಕ್ಷನ್ ನಲ್ಲಿ ಭಾಗಿಯಾಗಿ ಫ್ರಾನ್ಸ್ ಟಿಕೆಟ್ ನ್ನು ಖಚಿತಪಡಿಸಿಕೊಂಡಿದ್ದಳು. ಪ್ರಾನ್ಸ್ ನ ನಾರ್ಮಡಿಯಲ್ಲಿ ನಡೆದ ರೀಲೆ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾಳೆ.
ಈಕೆಯ ಸಾಧನೆಗೆ ಬೆನ್ನು ತಟ್ಟಿ ಹಿಂದೆ ನಿಂತಿದ್ದು ಈಕೆಯ ಕೋಚ್ ಶ್ಯಾಮಲಾ ಪಾಟೀಲ್. ಭಾರತದ ಟೀಮ್ನ ಕೋಚ್ ಆಗಿದ್ದ ಶ್ಯಾಮಲಾ ಪ್ರಾನ್ಸ್ನಲ್ಲಿ ಎಲ್ಲ ರೀತಿಯ ಸಪೋರ್ಟ್ ನೀಡುವ ಮೂಲಕ ಪ್ರಿಯಾಂಕಾ ಸಾಧನೆಗೆ ಕೈ ಜೋಡಿಸಿದ್ರು. ಮೂಲತಃ ಸಾರಿಗೆ ನೌಕರನ ಮಗಳಾಗಿರೋ ಪ್ರಿಯಾಂಕಾ ಇಷ್ಟೊಂದು ಸಾಧನೆ ಮಾಡಿರೋದು ಇಡೀ ಧಾರವಾಡಕ್ಕೆ ಹೆಮ್ಮೆ ತಂದಿದೆ.
64 ದೇಶಗಳ ಎದುರಿಗೆ ಸಮಬಲ ಹೋರಾಟದ ಮೂಲಕ ಎಲ್ಲರನ್ನು ಹಿಂದಿಕ್ಕಿ 3ನೇ ಸ್ಥಾನ ಪಡೆದಿದ್ದು ಧಾರವಾಡಕ್ಕೆ ಖುಷಿಯ ಸಂಗತಿ. ಕರ್ನಾಟಕದ ಇಬ್ಬರು ಹಾಗೂ ತಮಿಳುನಾಡಿನ ಇಬ್ಬರು ಯುವತಿಯರು ಪ್ರಿಯಾಂಕಾಗೆ ಕೈ ಜೋಡಿಸಿದ್ದು, 300 ಮೀಟರ್ ರೀಲೆಯಲ್ಲಿ ಕಂಚಿನ ಪದಕವನ್ನ ಗೆದ್ದು ಬೀಗಿದ್ದಾಳೆ. ಅದರಲ್ಲಿ ಫ್ರಾನ್ಸ್ ಮೊದಲ ಸ್ಥಾನ ಪಡೆದರೆ ಚೀನಾ ಎರಡನೇ ಸ್ಥಾನ, ಭಾರತಕ್ಕೆ 3ನೇ ಸ್ಥಾನ ದಕ್ಕಿದೆ.
ಎರಡು ವರ್ಷಗಳಿಂದ ಕೋವಿಡ್ ನೆಪ ಹೇಳಿ ಸರ್ಕಾರ ಯಾವುದೇ ಸಹಾಯವನ್ನು ಈ ಯುವ ಅಥ್ಲೆಟಿಕ್ಸ್ ಗಳಿಗೆ ನೀಡಿಲ್ಲ. ಆದ್ರೂ ಸಹ ತಮ್ಮದೇ ಸ್ವಂತ ಹಣದ ಮೂಲಕ ಸಾಲ ಶೂಲ ಮಾಡಿಕೊಂಡು ಈ ಯುವತಿ ಸಾಧನೆ ಮಾಡಿದ್ದು ನಿಜಕ್ಕೂ ಹೆಮ್ಮೆಯ ವಿಷಯ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/05/2022 07:46 pm