ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಸಾಧಿಸಬೇಕೆಂದು ಛಲವಿದ್ದರೆ, ಸಾಧಕನಿಗೆ ಯಾವುದು ಅಸಾಧ್ಯವಲ್ಲ, ಎಂಬುದಕ್ಕೆ ಹುಬ್ಬಳ್ಳಿ ಯುವಕ ಸಾಕ್ಷಿಯಾಗಿದ್ದಾನೆ. ಅಷ್ಟಕ್ಕೂ ಆತ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾನೆ ಎಂಬುದನ್ನು ತೋರಿಸುತ್ತೆವೆ ನೋಡಿ...
ಹೀಗೆ ಕೈಯಲ್ಲಿ ಗನ್ ಹಿಡಿದುಕೊಂಡು ಪ್ರ್ಯಾಕ್ಟೀಸ್ ಮಾಡುತ್ತಿರುವ ಇತನ ಹೆಸರು, ಆರಿಫ್ ಅಹಮದ್ ಚಳ್ಳಮರದ, ಮೂಲತಃ ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ, ಈತ ತಮ್ಮ ಚಿಕ್ಕ ವಯಸ್ಸಿನಲ್ಲೇ ಒಲಂಪಿಕ್ ದಲ್ಲಿ ಕ್ರೀಡೆ ಆಡಬೇಕು, ಕ್ರೀಡೆಯಲ್ಲಿ ಏನಾದರು ಸಾಧನೆ ಮಾಡಬೇಕೆಂದು ಹೊರಟಿದವನು, ಈಗ ಅವನ ಸಾಧನೆ ಗಗನಕ್ಕೆರಿದೆ. 2018 ರಲ್ಲಿ ರಾಜ್ಯ ಮಟ್ಟದಲ್ಲಿ ಬೆಳ್ಳಿ ಪದಕ, 2019 ಕ್ಕೆ ಒಲಂಪಿಕ್ಕೆ ಆಯ್ಕೆಯಾಗಿ ಈಗ 2021 ರ ಸಾಲಿನ ಇದೆ ನವೆಂಬರ್ 18 ರಂದು ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಶೂಟಿಂಗ್ ಚಾಂಪಿಯನಶೀಪ್ ಗೆ ಆಯ್ಕೆಯಾಗಿ ಹುಬ್ಬಳ್ಳಿ ಧಾರವಾಡಕ್ಕೆ ಇನ್ನಷ್ಟೂ ಹೆಮ್ಮೆ ತಂದಿದ್ದಾರೆ.
ಅಷ್ಟೇ ಅಲ್ಲದೆ ಇವರ ಸ್ಫೂರ್ತಿ ಎಂದರೆ ಅವರ ತಂದೆ, ಕಾರಣ ಅವರೊಬ್ಬರು ಮಾಜಿ ಆರ್ಮಿ ಮ್ಯಾನ್, ತಂದೆ ದೇಶ ಸೇವೆ ಮಾಡಿದರೆ, ಇತ್ತ ಮಗ ರಾಜ್ಯ ಮತ್ತು ದೇಶದ ಕೀರ್ತಿಯನ್ನು ಹೆಚ್ಚುಸುತ್ತಿರುವುದು ಕುಟುಂಬದಲ್ಲಿ ಸಂತಸ ಮೂಡಿದೆ.
ಒಟ್ಟಿನಲ್ಲಿ ಆರಿಫ್ ಅಹಮದ್ ಅವರ ಸಾಧನೆ ಆಕಾಶದುದ್ದಕ್ಕೂ ಬೆಳೆಯಲಿ, ದೇಶದ ಯುವಕರಿಗೆ ಸ್ಪೂರ್ತಿಯಾಗಲೆಂದು ಹುಬ್ಬಳ್ಳಿ ಧಾರವಾಡ ಜನರ ಆಶಯವಾಗಿದೆ.
Kshetra Samachara
25/10/2021 05:10 pm