ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪ್ಲೇರಿಂಗ್ ಜಗಲಿಂಗ್ ಮೂಲಕ ದೇಶ ಬೆಳಗ ಹೊರಟ ಕವಿತಾಳಿಗೆ ಬೇಕಿದೆ ಕಾಂಚಾಣ

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

ಕುಂದಗೋಳ : ಸಾಧನೆ ಮಾಡಬೇಕೆಂಬ ಛಲ ಕಂಡ ಕನಸನ್ನು ನನಸಾಗಿಸೋ ಧೈರ್ಯ, ಇದ್ದಲ್ಲಿ ಎಂಥವರೂ ಇತಿಹಾಸ ರೂಪಿಸಬಹುದು ಎಂಬ ಮಾತಿಗೆ ಇಲ್ಲೊಂದು ಗುಡಿಸಲಲ್ಲಿ ಅರಳಿದ ಪ್ರತಿಭೆ ದೇಶವನ್ನೆ ಬೆಳಗಲು ತಯಾರಾಗಿದೆ.

ಹೌದು ! ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ಕವಿತಾ ಮೇದಾರ ಎಂಬ ಯುವತಿ ಇದುವರೆಗೂ ಯಾವ ಮಹಿಳೆಯೂ ಮಾಡಿರದ ಸಾಧನೆ ಹಾದಿ ಕ್ರಮಿಸಿದ್ದು, ಆ ಸಾಧನೆ ಸಾಕರಕ್ಕಾಗಿ ಇದೀಗ ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ಭಾರತ ದೇಶದ ಸ್ಪರ್ಧಿಯಾಗಿ ಪ್ಲೇರಿಂಗ್ ಮತ್ತು ಜಗಲಿಂಗ್ ತನ್ನದೆ ಚಾಣಾಕ್ಷತನ ತೊರಲಿದ್ದಾಳೆ.

ಮೂಲತಃ ರೈತಾಪಿ ಕೂಲಿಕಾರರ ಮಗಳಾದ ಕವಿತಾ ಪ್ರಾಥಮಿಕ ಶಿಕ್ಷಣವನ್ನು ತಂದೆ ತಾಯಿ ಆಶ್ರಯದಲ್ಲಿ ಪೂರೈಸಿ ತಮ್ಮ ಮಾಮಂದಿರು ಹಾಗೂ ಅಜ್ಜಿ ಆಶ್ರಯದಲ್ಲಿ ಬಿ.ಕಾಮ್ ಪದವಿ ಶಿಕ್ಷಣ ಪೂರೈಸಿದ್ದು, ಪುನಾದಲ್ಲಿ ಪ್ಲೇರಿಂಗ್ ಮತ್ತು ಜಗಲಿಂಗ್ ತರಬೇತಿ ಪಡೆದು ಇಡೀ ಭಾರತ ದೇಶವನ್ನ ಸುತ್ತಿ ಪ್ರದರ್ಶನ ನೀಡಿದ್ದಾಳೆ.

ಸದ್ಯ ಇದೇ ಪ್ಲೇರಿಂಗ್ ಮತ್ತು ಜಗಲಿಂಗ್ ವರ್ಲ್ಡ್ ರೆಕಾರ್ಡ್ ಮಾಡಲು ಕವಿತಾ ಮೇದಾರಗೆ ಸ್ವಿಟ್ಜರ್ಲ್ಯಾಂಡ್ ದೇಶ ಕೈ ಮಾಡಿ ಕರೆದರೂ. ಅರ್ಥಿಕ ಪರಿಸ್ಥಿತಿ ಆ ಅವಕಾಶಕ್ಕೆ ಮುಳುವಾಗಿ ಪರಿಣಮಿಸಿದೆ. ಈ ಬಗ್ಗೆ ಅವರ ಮಾತನ್ನೊಮ್ಮೆ ಕೇಳ್ಬಿಡಿ.

ವಿಶೇಷವೆಂದರೇ ಇಡೀ ಭಾರತದಲ್ಲೇ ಪ್ಲೇರಿಂಗ್ ಮತ್ತು ಜಗಲಿಂಗ್ ಮಾಡುವ ಏಕೈಕ ಮಹಿಳಾ ಪ್ರತಿಭೆ ಕವಿತಾ ಮೇದಾರ ಎಂಬುದು ನಮ್ಮ ಭಾರತದ ಹೆಮ್ಮೆಯ ವಿಷಯ.

ಸದ್ಯ ಸಾಧನೆಯ ತವಕದಲ್ಲಿರುವ ಕವಿತಾ ಮೇದಾರಗೆ ಸ್ವಿಟ್ಜರ್ಲ್ಯಾಂಡ್ ದೇಶದ ವರ್ಲ್ಡ್ ರೆಕಾರ್ಡ್ ಅವಕಾಶದಲ್ಲಿ ಭಾಗವಹಿಸಲು ಸಹಾಯ ಮಾಡಲು ಇಚ್ಚಿಸುವವರು ಈ 9096523271 ಮೊಬೈಲ್ ಸಂಖ್ಯೆಗೆ ಸಂಪರ್ಕ ಮಾಡಿರಿ.

Edited By : Nagesh Gaonkar
Kshetra Samachara

Kshetra Samachara

03/12/2020 09:37 am

Cinque Terre

46.76 K

Cinque Terre

3

ಸಂಬಂಧಿತ ಸುದ್ದಿ