ಕುಂದಗೋಳ: ಪ್ರಾಥಮಿಕ ಶಿಕ್ಷಣದಲ್ಲಿ ಕಲಿತ ಯೋಗ ಪ್ರೌಢ ಶಾಲೆ ಹಂತದಲ್ಲೇ ಮರವಾಗಿ, ರಾಜ್ಯಮಟ್ಟಕ್ಕೆ ಒಬ್ಬ ವಿದ್ಯಾರ್ಥಿನಿಯನ್ನು ಪ್ರತಿನಿಧಿಸುವಂತೆ ಮಾಡಿ, ಧೈರ್ಯ ನೀಡಿದ ಹೆತ್ತವರು, ಪ್ರೋತ್ಸಾಹ ತುಂಬಿದ ಶಿಕ್ಷಕರಿಗೆ ಗೌರವ ತಂದಿದೆ.
ಹೌದು ! ಕುಂದಗೋಳ ಪಟ್ಟಣದ ಬಡ ಕುಟುಂಬದ ಕುಡಿ, ಸಹನಾ ಬಸವರಾಜ ಚವ್ಹಾಣ. ಹುಬ್ಬಳ್ಳಿಯ ಕೆ.ಎಸ್.ಎಸ್. ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಯೋಗ ಸ್ಪರ್ಧೆ ಜಯಿಸಿ, ತೃತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾಳೆ.
ಪ್ರಸ್ತುತ ಕುಂದಗೋಳ ಪಟ್ಟಣದ ಸದ್ಗುರು ಶಿವಾನಂದ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿಯ ಓದುತ್ತಿರುವ ಸಹನಾ, 14 ರಿಂದ 16 ವರ್ಷದ ಯೋಗ ಸ್ಷರ್ಧೆಯಲ್ಲಿ ಯೋಗದ ಪ್ರತಿ ಆಸನಗಳನ್ನು, ಲೀಲಾಜಾಲವಾಗಿ ಮಾಡಿ ಪ್ರಶಸ್ತಿ ಪ್ರಮಾಣಪತ್ರ ಪಡೆದು ಈಗ ರಾಜ್ಯಮಟ್ಟಕ್ಕೆ ಸಿದ್ಧತೆ ಆರಂಭಿಸಿದ್ದಾಳೆ.
ಯೋಗ ಕಲೆ ಮಾತ್ರವಲ್ಲದೆ ಶೈಕ್ಷಣಿಕ ಪ್ರಗತಿ, ಖೋ ಖೋ, ಕಬಡ್ಡಿ ಆಟದಲ್ಲೂ ಮುಂಚೂಣಿಯಲ್ಲಿರುವ ಸಹನಾಗೆ, ಸಹಪಾಠಿ ವಿದ್ಯಾರ್ಥಿನಿಯರು, ಶಿಕ್ಷಕರು ಸಹ ಬೆನ್ನು ತಟ್ಟಿ ರಾಜ್ಯಮಟ್ಟದ ಸ್ಪರ್ಧೆಗೆ ಹುರಿದುಂಬಿಸಿದ್ದಾರೆ.
ಒಟ್ಟಾರೆ ಪ್ರೌಢ ಶಾಲಾ ಹಂತದಲ್ಲೇ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಸಹನಾ ಚವ್ಹಾಣ, ಮುಂದೊಂದು ದಿನ ರಾಷ್ಟ್ರ, ಅಂತಾರಾಷ್ಟ್ರೀಯ ಯೋಗ ಪಟು ಆಗಿ ಹೊರಹೊಮ್ಮಲಿ ಎಂಬುದು ಪಬ್ಲಿಕ್ ನೆಕ್ಸ್ಟ್ ಆಶಯ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/07/2022 08:11 am