ಕುಂದಗೋಳ: ಒಬ್ಬನ ತಂದೆ ಕ್ಷೌರಿಕ, ಇನ್ನೊಬ್ಬನ ತಂದೆ ವಿಶೇಷಚೇತನ, ಒಬ್ಬಳ ತಂದೆ ಕಟ್ಟಡ ಕಾರ್ಮಿಕ. ಆದರೆ ಈ ಮೂವರ ಮಕ್ಕಳು ಮಾತ್ರ ರಾಜ್ಯ ಮಟ್ಟದ ಯೋಗ ಪಟುಗಳು, ನೂರೆಂಟು ಪ್ರಶಸ್ತಿ ಪುರಸ್ಕಾರ, ವೇದಿಕೆ ಚಪ್ಪಾಳೆ ಗಳಿಸಿದವರು.
ಹೌದು. ಕಷ್ಟದ ಹಿಂದೆ ಸುಖವಿದೆ ಎನ್ನುವ ಮಾತಿನ ತಾತ್ಪರ್ಯಕ್ಕೆ ಶ್ರೀ ಹರಭಟ್ಟ ಸಂಯುಕ್ತ ಪದವಿಪೂರ್ವ ಕಾಲೇಜು ಮಕ್ಕಳೇ ಸ್ಫೂರ್ತಿಯಾಗಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆ ಜಯಿಸಿ ರಾಜ್ಯ ಮಟ್ಟದ ವೇದಿಕೆ ಏರಲು ಸಜ್ಜಾಗಿದ್ದಾರೆ. ಹೀಗೆ ಲೀಲಾಜಾಲವಾಗಿ ಯೋಗ ಮಾಡುವ ಕುಂದಗೋಳ ತಾಲೂಕಿನ ಯರೇಬೂದಿಹಾಳದ ಆಕಾಶ್ ಹಡಪದ, ಹಿರೆನೇರ್ತಿಯ ಬಸುರಾಜ ಸುಣಗಾರ ಹಾಗೂ ಪಶುಪತಿಹಾಳದ ಸಂಗೀತಾ ನಾಂಗಲಿಣ್ಣನವರ 16ರಿಂದ 18 ವರ್ಷದ ಒಳಗಿನ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟದ ಪ್ರತಿನಿಧಿಸಲು ತೊಡೆ ತೊಟ್ಟಿದ್ದಾರೆ.
ಪ್ರಾಥಮಿಕ ಪ್ರೌಢಾ ಶಾಲಾ ಹಂತದಲ್ಲಿಯೆ ಅಂದಿನ ಶಾಲಾ ಗುರುಗಳಿಂದ ಯೋಗ ಮುಂದುವರೆಸಿದ ವಿದ್ಯಾರ್ಥಿಗಳು ಇಂದು ಪದವಿಪೂರ್ವ ವಿಭಾಗದಲ್ಲಿ ಅದೇ ಸಾಧನೆಯ ಮಾರ್ಗವನ್ನು ಕರಗತ ಮಾಡಿಕೊಂಡಿದ್ದಾರೆ.
ಒಟ್ಟಾರೆ ಈಗಾಗಲೇ ಕುಂದಗೋಳ ತಾಲೂಕಿನ ಶ್ರೀ ಹರಭಟ್ಟ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಯೋಗ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ಶಿಕ್ಷಕರಾಗಿ ಸೇವೆ ನೀಡುತ್ತಿದ್ದಾರೆ. ಇವರಿಗೂ ಈ ಭಾಗ್ಯ ಒದಗಿ ಬರಲಿ, ಈ ಮೂವರು ಮಕ್ಕಳ ಯೋಗ ಸ್ಪರ್ಧೆ ಹಾಗೂ ಕಲಿಕೆಗೆ ಸಹಾಯ ಮಾಡಲು ಇಚ್ಛಿಸುವವರು 9901436448ಗೆ ಕರೆ ಮಾಡಬಹುದು.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/06/2022 06:26 pm