ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡ್ರಗ್ಸ್ ಜಾಗೃತಿ ಕಾಶ್ಮೀರ ಟು ಕನ್ಯಾಕುಮಾರಿ ಸೈಕಲ್ ಜಾಥಾ

ಹುಬ್ಬಳ್ಳಿ: ಧಾರವಾಡ ನಿವಾಸಿ ಹೆಸ್ಕಾಂ ಇನ್ಸ್ಪೆಕ್ಟರ್ ಮುರಗೇಶ್ ಆರ್‌ ಚನ್ನಣ್ಣವರ ಸೈಕಲ್ ಮೂಲಕ ಕಾಶ್ಮೀರ ಟು ಕನ್ಯಾಕುಮಾರಿ ವರೆಗೂ ಜಾಥಾ ಮಾಡಿದ್ದಾರೆ. ಡ್ರಗ್ಸ್ ಹಾಗೂ ಇನ್ನಿತರ ಮಾದಕ ವಸ್ತುಗಳ ಸೇವನೆ ದುಷ್ಪರಿಣಾಮಗಳ ಬಗ್ಗೆನೂ ಜಾಗೃತಿ ಮೂಡಿಸುತ್ತಲೇ ಬಂದಿದ್ದಾರೆ.ಹುಬ್ಬಳ್ಳಿಗೆ ಬಂದು ತಲುಪಿದ ಮುರಗೇಶ್ ಅವರಿಗೆ ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಸನ್ಮಾನಿಸಲಾಗಿದೆ. ಉಪನಗರ ಠಾಣೆ ಇನ್ಸ್ಪೆಕ್ಟರ್ ರವಿಚಂದ್ರನ್, ಟ್ರಾಫಿಕ್ ಇನ್ಸ್ಪೆಕ್ಟರ್ ಎನ್. ಕಾಡದೇವರಮಠ, ಪೊಲೀಸ್ ಸಿಬ್ಬಂದಿ ಹಾಗೂ ಆಟೋ ಚಾಲಕರ ಸಂಘ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

22/12/2021 03:20 pm

Cinque Terre

17.61 K

Cinque Terre

1

ಸಂಬಂಧಿತ ಸುದ್ದಿ