ಈತನಿಗೆ 26 ಬಾರಿ ಶಸ್ತ್ರಚಿಕಿತ್ಸೆ, ಧರಿಸಿರುವ ಬಟ್ಟೆಗಿರುವ ಹೊಲಿಗೆಗಳಿಗಿಂತ ದೇಹದ ಮೇಲೆ 6500ಕ್ಕೂ ಹೆಚ್ಚು ಹೊಲಿಗೆಗಳು. ದೇಹ ನಲುಗಿದ್ದರೂ ಆತ್ಮಸ್ಥೈರ್ಯ ಗಟ್ಟಿ. ಯಾವುದೇ ಕಷ್ಟ ಬಂದರೂ ಬಿಡದೇ ಮುನ್ನುಗಿ ಮುಗಿಲೆತ್ತರಕ್ಕೆ ಕೀರ್ತಿಯನ್ನು ಕೊಂಡೊಯ್ಯ ಬಲ್ಲೆ ಎನ್ನುವ ಯುವಕನ ಸ್ಟೋರಿ ಇದು.
ಹೀಗೆ ಹಾರ್ಡ್ ವರ್ಕೌಟ್ ಮಾಡುತ್ತಿರುವ ಈ ಬಾಲಕ ಹುಬ್ಬಳ್ಳಿಯ ಸಿದ್ಧಾರ್ಥ ಬಳ್ಳಾರಿ . ಬಟ್ಟೆ ಹೊಲಿದೆಂತೆ ಈತನ ದೇಹದ ಮೇಲೆ ಸಾವಿರಾರು ಹೊಲಿಗೆಗಳಿದ್ದರೂ ಛಲ ಬಿಡದೇ ಅಂತಾರಾಷ್ಟ್ರೀಯ ಐಎಸ್ಎಫ್ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿ ದೇಶವನ್ನು ಪ್ರತಿನಿಧಿಸುತ್ತಿದ್ದಾನೆ.
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ಯಾರಾ ಕ್ರೀಡಾಕೂಟಗಳಲ್ಲಿ ಹಲವು ಪದಕಗಳನ್ನು ಗೆದ್ದಿರುವ ಈತ ಈಗ 19ನೇ ಅಂತಾರಾಷ್ಟ್ರೀಯ ಸ್ಪೋರ್ಟ್ ಫೆಡರೇಷನ್ (ಐಎಸ್ಎಫ್) ಆಯೋಜಿಸಿರುವ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಈ ಕ್ರೀಡಾಕೂಟ ಮೇ 14ರಿಂದ ಫ್ರಾನ್ಸ್ ನಲ್ಲಿ ನಡೆಯಲಿದ್ದು 18 ವರ್ಷದ ವಿಭಾಗದಲ್ಲಿ ,ನಗರದ ಶಾಂತಿನಿಕೇತನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಸಿದ್ದಾರ್ಥ ಪಾಲ್ಗೊಳ್ಳಲಿದ್ದಾನೆ.
ಎರಡೂವರೆ ವರ್ಷಗಳ ಹಿಂದೆ ಭಾರಿ ವಿದ್ಯುತ್ ಅವಘಡದಲ್ಲಿ ಸಿದ್ದಾರ್ಥ್ ನ ಹೊಟ್ಟೆಯ ಕೆಳಭಾಗವೆಲ್ಲ ಸುಟ್ಟು ಹೋಗಿತ್ತು, ತೊಡೆಯ ಭಾಗದ ಮಾಂಸ ಛಿದ್ರವಾಗಿತ್ತು. ಈಗಲೂ ಎಡಗೈ ಸ್ವಾಧೀನವಿಲ್ಲ. ಇದನ್ನೆಲ್ಲ ಸರಿಪಡಿಸಲು 26 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.
ಎಲ್ಲ ಸವಾಲು ಮೆಟ್ಟಿ ನಿಂತ ಸಿದ್ದಾರ್ಥ್ ಬಳ್ಳಾರಿ ಐಎಸ್ಎಫ್ ಕ್ರೀಡಾಕೂಟದಲ್ಲಿ 100 ಮೀಟರ್, 400 ಮೀ. ಮತ್ತು ಲಾಂಗ್‌ಜಂಪ್ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ತಂಡದ ಆಯ್ಕೆಗಾಗಿ ಭುವನೇಶ್ವರದಲ್ಲಿ ಈಚೆಗೆ ಭಾರತ ಸ್ಕೂಲ್ ಗೇಮ್ಸ್ ಫೆಡರೇಷನ್ (ಎಸ್‌ಜಿಎಫ್ಐ) ಆಯೋಜಿಸಿದ್ದ ಅಯ್ಕೆ ಟ್ರಯಲ್ಸ್ನಲ್ಲಿ ಅರ್ಹತೆ ಪಡೆದಿದ್ದಾರೆ.
ಹುಬ್ಬಳ್ಳಿಯ ಕ್ರೀಡಾ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ಹಾಗೂ ಸರ್ಕಾರ ಧನ ಸಹಾಯ ಬೇಕಾಗಿದೆ.
Bank of Baroda
Siddarth Manjunat Ballari
A/C 0397010031649
Ifsc code- BORBOKESHWA
Contact number-8097452371
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/03/2022 06:13 pm