ಹುಬ್ಬಳ್ಳಿ: ಕೋವಿಡ್ ಗಂಡಾಂತರ ಕಾಲದಲ್ಲಿ ಬಹುತೇಕ ಜನರಲ್ಲಿ ಕ್ರೀಡಾ ಚಟುವಟಿಕೆ ಹಾಗೂ ದೈಹಿಕ ಆರೋಗ್ಯಕ್ಕಾಗಿ ಮಾಡುತ್ತಿದ್ದ ಕಸರತ್ತುಗಳು ಕಡಿಮೆಯಾಗಿದೆ.
ಇದನ್ನು ಮತ್ತೆ ಮರುಕಳಿಸಲು ಹುಬ್ಬಳ್ಳಿಯ ಸತ್ವಮ್ ಫಿಸಿಯೋತೆರಪಿ ಹಾಗೂ ಹೆಲ್ತ್ ಕ್ಲಿನಿಕ್ ಸಹಯೋಗದಲ್ಲಿ 'ಸೀರೆ-ಲುಂಗಿಯಲ್ಲಿ ಓಟ' ಸ್ಪರ್ದೆ ಆಯೋಜಿಸಲಾಗಿದೆ. ಏಪ್ರಿಲ್ 3ರಂದು ಬೆಳಿಗ್ಗೆ 6-15ಕ್ಕೆ ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯ ಬಿವಿಬಿ ಕ್ಯಾಂಪಸ್ ಮೈದಾನದಲ್ಲಿ ನಡೆಯಲಿದೆ. 7ರಿಂದ 70 ವರ್ಷ ವಯಸ್ಸಿನವರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ಇರುತ್ತದೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು ನಿಮ್ಮ ಹೆಸರು ನೋಂದಾಯಿಸಲು 8310126083 ಸಂಖ್ಯೆಗೆ ಕರೆ ಮಾಡಿ. ಬನ್ನಿ ಸೀರೆ-ಲುಂಗಿ ಓಟದಲ್ಲಿ ಪಾಲ್ಗೊಳ್ಳಿ. ಈ ಸ್ಪರ್ಧೆ ನಿಮ್ಮ ಆರೋಗ್ಯದ ಜಾಗೃತಿಗಾಗಿ..
Kshetra Samachara
30/03/2022 06:55 pm