ಹುಬ್ಬಳ್ಳಿ: ಸ್ವರ್ಣಾ ಗ್ರೂಪ್ ಆಫ್ ಕಂಪನಿಸ್ ಹಾಗೂ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ ಸಹಯೋಗದೊಂದಿಗೆ ವಾಣಿಜ್ಯನಗರಿ ಹುಬ್ಬಳ್ಳಿಯ ವಾಸವಿ ಮಹಲ್ ನಲ್ಲಿ ಆಯೋಜಿಸಲಾಗಿದ್ದ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ಶಿಪ್ ಟೂರ್ನಮೆಂಟ್ ಗೆ ಶಿರೂರ ಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಂಸ್ಥಾಪಕ ಆನಂದ ಗುರೂಜಿ, ಸ್ವರ್ಣಾ ಗ್ರೂಪ್ ಮಾಲೀಕರಾದ ಡಾ. ವಿ.ಎಸ್.ವಿ ಪ್ರಸಾದ ಹಾಗೂ ಪಂಜುರ್ಲಿ ಹೋಟೆಲ್ ಮಾಲೀಕರಾದ ರಾಜೇಂದ್ರ ಶೆಟ್ಟಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಇನ್ನೂ ಕಿಲ್ಲರ್ ಕೊರೋನಾ ಹಾವಳಿಯಿಂದ ಸುಮಾರು ಎರಡು ವರ್ಷಗಳಿಂದ ನಡೆಯದೇ ಇರುವ ಟೂರ್ನಮೆಂಟ್ ಈಗ ಕೊರೋನಾ ಹಾವಳಿ ತಗ್ಗಿದ್ದು, ಕರಾಟೆ ಪಟುಗಳಲ್ಲಿ ಉತ್ಸಾಹ ಚಿಗುರೊಡೆದಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಹಾಗೂ ಅಂತರರಾಜ್ಯದಿಂದ ಎಲ್ಲ ವಯಸ್ಸಿನ ಕರಾಟೆ ಪಟುಗಳು ಆಗಮಿಸಿ ತಮ್ಮ ಪ್ರದರ್ಶನಕ್ಕೆ ಸಿದ್ಧರಾಗಿರುವುದು ವಿಶೇಷವಾಗಿದೆ.
ಪುಟಾಣಿಗಳಿಂದ ಹಿಡಿದು ದೊಡ್ಡವರು ಕೂಡ ಈ ಚಾಂಪಿಯನ್ಶಿಪ್ ನಲ್ಲಿ ಪಾಲ್ಗೊಂಡಿದ್ದು, ಆತ್ಮರಕ್ಷಣೆಗೆ ಮಾತ್ರವಲ್ಲದೇ ಮತ್ತೊಬ್ಬರಿಗೆ ಸಹಾಯ ಮಾಡಲು ಕರಾಟೆ ಪೂರಕವಾಗಲಿ ಎಂದು ಗಣ್ಯರು ಶುಭ ಹಾರೈಸಿದ್ದಾರೆ.
ಇನ್ನೂ ಕರಾಟೆ ಪಟುಗಳಲ್ಲಿ ಈಗಾಗಲೇ ಚಾಂಪಿಯನ್ಶಿಪ್ ಕನಸು ಚಿಗುರೊಡೆದಿದ್ದು, ಪ್ರತಿಜ್ಞಾವಿಧಿ ಸ್ವೀಕರಿಸಿದ ಪುಟ್ಟ ಪುಟ್ಟ ಕೈಗಳು ಕರಾಟೆಯ ಅಖಾಡಕ್ಕೆ ಇಳಿಯುವ ಮೂಲಕ ಟೂರ್ನಮೆಂಟ್ ಗೆ ಗ್ರೀನ್ ಸಿಗ್ನಲ್ ನೀಡಿದರು. ಅಲ್ಲದೇ ಈ ಟೂರ್ನಮೆಂಟ್ ಕರಾಟೆ ಪಟುಗಳಲ್ಲಿ ಹರ್ಷ ಮೊಳಕೆ ಒಡೆದಿದೆ.
Kshetra Samachara
09/10/2021 10:17 pm