ನವಲಗುಂದ : ನವಲಗುಂದ ಪಟ್ಟಣದ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂಬರ್ 1 ರಲ್ಲಿ 2022 ಸಾಲಿನ ನವಲಗುಂದ 1 ಕ್ಲಸ್ಟರ್ ಮಟ್ಟದ ಪಂದ್ಯಾಟ ಉದ್ಘಾಟನೆಯನ್ನು ನೌಕರರ ಸಂಘದ ಅಧ್ಯಕ್ಷ ರಾದ ಎ.ಬಿ.ಕೊಪ್ಪದ ಅವರು ನೆರವೇರಿಸಿದರು.
ನಂತರ ಮಾತನಾಡಿದ ಅವರು, ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗ ಮಾನವನ ಪರಿಪೂರ್ಣ ವಿಕಾಸಕ್ಕಾಗಿ ಆಟ ಮುಖ್ಯ ಪಾತ್ರ ವಹಿಸುತ್ತದೆ. ಶರೀರ ಸಂಪತ್ತು ಕಾಪಾಡಲು ನಿಯಮಿತ ವ್ಯಾಯಾಮ, ಆಟ, ಸಮತೋಲನ ಆಹಾರ ಅಗತ್ಯ. ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರಲು ಸಾಧ್ಯ, ಹಾಗಾಗಿ ಪಾಠದೊಂದಿಗೆ ಆಟ ವಿದ್ಯಾರ್ಥಿಗಳಿಗೆ ಇಂದಿನ ಅವಶ್ಯಕತೆ ಆಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ಎಫ್.ನೀರಲಗಿ, ಎಸ್.ಕೆ.ಕುರಹಟ್ಟಿ, ಎನ್.ಎನ್. ಹಾಲಿಗೇರಿ, ಬಿ.ಬಿ.ಹೊನ್ನಕುದರಿ, ಎಸ್.ಎಂ.ಬೆಂಚೀಕೇರಿ, ಆರ್.ಎಚ್ ನೇಗಲಿ, ಎನ್.ವಾಯ್ ಕಳಸಾಪೂರ, ವಿ.ಎಚ್.ಚಾಕಲಬ್ಬಿ, ಎನ್.ಎಸ್ ತಾಳಿಕೋಟಿಮಠ ಇತರರು ಹಾಜರಿದ್ದರು.
Kshetra Samachara
03/08/2022 12:47 pm