ಹುಬ್ಬಳ್ಳಿ: ಪಸ್ಟ್ ಕ್ರಿಕೆಟ್ ಅಕಾಡೆಮಿ ವತಿಯಿಂದ 14 ವರ್ಷದೊಳಗಿನ ಮಕ್ಕಳಿಗೆ ಸ್ಕೈ 360 ಕ್ರಿಕೆಟ್ ಟೋರ್ನಾಮೆಂಟ್ ಅನ್ನು ಇದೇ 13ರಿಂದ 20ರ ವರೆಗೆ ಹುಬ್ಬಳ್ಳಿ ದೇಶಪಾಂಡೆನಗರ ಜಿಮಖಾನ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಸ್ಟ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾದ ಸಂದೀಪ ಪೈ ಹೇಳಿದರು.
ನಗರದಲ್ಲಿಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು,ಮಕ್ಕಳಲ್ಲಿ ಕ್ರೀಡಾ ಆಸಕ್ತಿಯನ್ನು ಹೆಚ್ಚಿಸುವ ಹಾಗೂ ಪ್ರತಿಭಾವಂತ ಮಕ್ಕಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಸದುದ್ದೇಶದಿಂದ ಟೊರ್ನಾಮೆಂಟ್ ಆಯೋಜನೆ ಮಾಡಲಾಗಿದ್ದು,ಮಕ್ಕಳನ್ನು ಉತ್ತಮ ಕ್ರೀಡಾಪಟುಗಳನ್ನಾಗಿ ಮಾಡುವ ಸದುದ್ದೇಶವನ್ನು ಅಕಾಡೆಮಿ ಹೊಂದಿದೆ ಎಂದರು.
ಹುಬ್ಬಳ್ಳಿಯಿಂದ BDK COLT, ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್,ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ, ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ, ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ, ಚೈತನ್ಯ ಸ್ಪೋರ್ಟ್ಸ್ ಫೌಂಡೇಶನ್, ಚಾಂಪಿಯನ್ಸ್ ನೆಟ್ ಭಾಗವಹಿಸಲಿದ್ದಾರೆ.
ಧಾರವಾಡದಿಂದ ವಸಂತ ಮುರಡೇಶ್ವರ ಕ್ರಿಕೆಟ್ ಅಕಾಡೆಮಿ, ಎಸ್.ಡಿ.ಎಂ ಕ್ರಿಕೆಟ್ ಅಕಾಡೆಮಿ, ಪಸ್ಟ್ ಕ್ರಿಕೆಟ್ ಅಕಾಡೆಮಿ ಭಾಗವಹಿಸಲಿದ್ದಾರೆ.
ಗದಗನಿಂದ ಜನುಪಂತರ ಕ್ರಿಕೆಟ್ ಅಕಾಡೆಮಿ ಬೆಳಗಾವಿಯಿಂದ ಆನಂದ ಕ್ರಿಕೆಟ್ ಅಕಾಡೆಮಿ ಸೇರಿದಂತೆ ಒಟ್ಟು 12 ತಂಡಗಳು ಟೊರ್ನಾಮೆಂಟ್ ನಲ್ಲಿ ಭಾಗವಹಿಸುತ್ತಿದ್ದು,ವಿಜೇತ ತಂಡಗಳಿಗೆ ಟ್ರೋಪಿ,ಪ್ರಶಸ್ತಿ ಪತ್ರ,ಮೆಡಲ್ ವಿತರಣೆ ಮಾಡಲಾಗುವುದು ಎಂದು ಅವರು ಹೇಳಿದರು.
ಬೆಸ್ಟ್ ಬ್ಯಾಟ್ಸಮನ್, ಬೆಸ್ಟ್ ಬೌಲರ್, ಬೆಸ್ಟ್ ವಿಕೆಟ್ ಕೀಪರ್ ಹಾಗೂ ಮ್ಯಾನ್ ಆಫ್ ದಿ ಸೀರಿಜ್ ಆಟಗಾರರಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ.
ಟೊರ್ನಾಮೆಂಟ್ ಉದ್ಘಾಟನೆಯನ್ನು ಸ್ಕೈ 360 ಸೊಲ್ಯೂಷನ್ ನಿರ್ದೇಶಕ ಮಹೇಶ ಮಲ್ಗಣ್ಣವರ ನೇರವೇರಿಸಲಿದ್ದು,ಅತಿಥಿಗಳಾಗಿ ಧಾರವಾಡ ವಲಯದ ಮಾಜಿ ಕನ್ವೇನರ್ ಬಾಬಾ ಬುಸದ,ಮಾಲೀಕರಾದ ಅರುಣ ಸಣ್ಣಸೋಲಾರ,ಕ್ಯಾಪ್ಟನ್ ಅರುಣಕುಮಾರ ಚಿಮ್ಮಲಗಿ,ಸಮಾಜ ಸೇವಕರಾದ ಪ್ರಸಾದ ಶೆಟ್ಟಿ,ಪ್ರಶಾಂತ ಶೆಟ್ಟಿ,
19ದೊಳಗಿನ ಕ್ರಿಕೆಟ್ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಆಟಗಾರ ಮನೋಜ ಮಲಹೋತ್ರ,23 ವರ್ಷದೊಳಗಿನ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ ಕ್ರಿಕೆಟ್ ಆಟಗಾರ ರಾಹುಲ್ ವರ್ಣೇಕರ ಆಗಮಿಸಲಿದ್ದಾರೆ.
ಇನ್ನೂ ಕ್ರಿಕೆಟ್ ಪಂದ್ಯವನ್ನು ಡ್ರೋನ್ ಕ್ಯಾಮರಾಗಳ ಮೂಲಕ ಲೈವ್ ಪ್ರದರ್ಶನ ಕೂಡ ನೀಡಲಾಗುತ್ತಿದ್ದು,ಸ್ಕೈ 360 ಸೆಲ್ಯುಷನ್ ಯೂ ಟೂಬ್ ಚಾನೆಲ್ ಮೂಲಕ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಬಹುದಾಗಿದೆ.
Kshetra Samachara
11/12/2020 12:34 pm