ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ
ಹುಬ್ಬಳ್ಳಿ- ಹವ್ಯಾಸಕ್ಕೆಂದು ಆಡಲು ಹೋದ ಈ ಯುವತಿ, ಈಗ ಕ್ರೀಡೆಯಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರದಲ್ಲಿ ಮಿಂಚುತ್ತಿದ್ದಾಳೆ....
ವಿದ್ಯಾಕಾಶಿ ಎಂದು ಪ್ರಸಿದ್ಧ ಆಗಿರುವ ಧಾರವಾಡ ಜಿಲ್ಲೆ, ಶಿಕ್ಷಣಕ್ಕೆ ಅಷ್ಟೇ ಸೀಮಿತ ಅಲ್ಲದೆ, ಕ್ರೀಡೆಯಲ್ಲೂ ಮೇಲುಗೈ ಸಾಧಿಸಿದೆ.. ಈಕೆ ಮೂಲತಃ ಹುಬ್ಬಳ್ಳಿಯ ನಿವಾಸಿ ಅಟ್ಯಾ ಪಟ್ಯಾ ಕ್ರೀಡೆಯಲ್ಲಿ ಭಾರತ ತಂಡದ ಆಟಗಾರ್ತಿ ಅನಿತಾ ಬಿಚಗಟ್ಟಿ. ರಾಷ್ಟ್ರೀಯ ಟೂರ್ನಿಗಳಲ್ಲಿ 11 ಬಾರಿ ಆಡಿರುವ ಈ ಕುವರಿ, ರಾಜ್ಯ ಸರ್ಕಾರದ ನೀಡಿರುವ 2019ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾಳೆ. ತರಬೇತುದಾರ ಆನಂದ ಸದ್ಲಾಪುರ ಅವರ ಗರಡಿಯಲ್ಲಿ ಪಳಗಿ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಅಟ್ಯಾ ಪಟ್ಯ ಕ್ರೀಡೆಯಲ್ಲಿ ಸಾಧನೆ ಮಾಡಿತ್ತಿದ್ದಾರೆ.....
ಅಷ್ಟೇ ಅಲ್ಲದೆ, ಅನಿತಾ 2018 ರಲ್ಲಿ ನೇಪಾಳ ಮತ್ತು 2019 ರಲ್ಲಿ ಭೂತಾನ್ ನಲ್ಲಿ ನಡೆದ, ಅಂತರರಾಷ್ಟ್ರೀಯ ಅಟ್ಯಾ ಪಟ್ಯಾ ಚಾಂಪಿಯನ್‌ಶಿಪ್ ನಲ್ಲಿ, ಭಾರತ ತಂಡಕ್ಕೆ ನಾಯಕಿ ಆಗಿದ್ದರು. ಇನ್ನು ಇವಳ ಸಾಧನೆಯನ್ನು ಕಂಡು, ಮುಖ್ಯಮಂತ್ರಿ ಯಡಿಯೂರಪ್ಪ ಅವರು, ನವೆಂಬರ್ 2 ರಂದು, ಬೆಂಗಳೂರಿನ ವಿಧಾನ ಸೌಧದಲ್ಲಿ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ನೀಡಿ, ಒಂದು ಲಕ್ಷ ರೂ ಚೆಕ್ ನ್ನು ಕೊಟ್ಟು ಪ್ರೋತ್ಸಾಹಿಸಿದ್ದಾರೆ. ಅಷ್ಟೇ ಅಲ್ಲದೇ ಹುಬ್ಬಳ್ಳಿಯ ಬಿಜೆಪಿ ಪೂರ್ವ ಎಸ್.ಸಿ ಯುವ ಮೋರ್ಚಾ ಅಧ್ಯಕ್ಷ ಜಶ್ವಂತ ಜಾಧವ ಮತ್ತು ಪ್ರಧಾನ ಕಾರ್ಯದರ್ಶಿಗಳು ಸೇರಿಕೊಂಡು ಸನ್ಮಾನ ಮಾಡಿ ಸಂತೋಷವನ್ನು ವ್ಯಕ್ತಪಡಿಸಿದರು. ಇದನ್ನು ಕಂಡ ಕುಟುಂಬಸ್ಥರು ತುಂಬ ಖುಷಿ ಪಟ್ಟಿದ್ದಾರೆ.
ಹೀಗೆ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಪ್ರತಿಭೆಯ ಎಲ್ಲ ಕನಸು ನನಸಾಗಲಿ ಮತ್ತಷ್ಟು ಎತ್ತರಕ್ಕೆ ಬೆಳೆದು ನಮ್ಮ ದೇಶದ ಹೆಸರನ್ನು ಗುರುತಿಸಲಿ ಎಂಬುವುದು ನಮ್ಮ ಆಶಯ......!
Kshetra Samachara
07/11/2020 04:47 pm