ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗುರು ಇಲ್ಲದೇ ಸಾಧನೆಗೆ ಸಿದ್ಧವಾಗುತ್ತಿರುವ ಹುಬ್ಬಳ್ಳಿಯ ಬಾಲಕ

ಹುಬ್ಬಳ್ಳಿ- ಗುರು ಇದ್ದರು ಸರಿಯಾಗಿ ಅಭ್ಯಾಸ ಮಾಡುವುದೇ ತುಂಬಾ ಕಷ್ಟ, ಅಂತಹ ಸಂದರ್ಭದಲ್ಲಿ ಇಲ್ಲೊಬ್ಬ ಬಾಲಕ ಯಾವುದೇ ಮಾರ್ಗದರ್ಶಕರ ಮಾರ್ಗದರ್ಶನ ಇಲ್ಲದೇ, ಸ್ವಂತ ಪರಿಶ್ರಮದಿಂದ ಸ್ಕೇಟಿಂಗ್ ಅಭ್ಯಾಸ ಮಾಡುವ ಮೂಲಕ ಸಾಧನೆಗೆ ಸಜ್ಜಾಗಿದ್ದಾನೆ...

ಹೀಗೆ ಸ್ಕೇಟಿಂಗ್ ಮೂಲಕ ಬೈಕ್ ಪಾಲೋ ಮಾಡುತ್ತಿರುವ ಈ ಬಾಲಕನ ಹೆಸರು ಸಚಿನ, ನವನಗರದ ನಿವಾಸಿ' ಮಲ್ಲಯ್ಯಜ್ಜ ಎಂಬುವವರು ಮುದ್ದಿನ ಮಗ. ಸ್ಕೇಟಿಂಗ್‌ ನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡು, ಗುರು ಇಲ್ಲದೆ ತಂದೆಯ ಮಾರ್ಗದರ್ಶನದಲ್ಲಿ ತನ್ನ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು, ದಿನಂಪ್ರತಿ ಕಷ್ಟಪಟ್ಟು ಸ್ಕೇಟಿಂಗ್ ಅಭ್ಯಾಸವನ್ನು ನಡೆಸುತ್ತಿದ್ದಾನೆ. ಪ್ರತಿದಿನ ಬೆಳಿಗ್ಗೆ ಎದ್ದು, ತನ್ನ ತಂದೆಯೊಂದಿಗೆ ಸ್ಕೇಟಿಂಗ್ ಪ್ರ್ಯಾಕ್ಟೀಸ್ ಮಾಡಲು ಹೋಗುವುದು ಅಭ್ಯಾಸ ಮಾಡಿಕೊಂಡಿದ್ದಾನೆ. ಸಚಿನ ಅತ್ಯಂತ ಉತ್ಸಾಹಕನಾಗಿ ಸ್ಕೇಟಿಂಗ್ ಅನ್ನು ಅಭ್ಯಾಸ ಮಾಡಿ ಸ್ಕೇಟಿಂಗ್‌ ನಲ್ಲಿ ಏನಾದರೂ ಸಾಧನೆ ಮಾಡಲು ಹಂಬಲಿಸುತ್ತಿದ್ದಾನೆ. ಸಚಿನ್ ತಂದೆ ಮಲ್ಲಯ್ಯಜ್ಜ ಹುಬ್ಬಳ್ಳಿಯ ನವನಗರದಲ್ಲಿ ಸಣ್ಣದೊಂದು ಹಾಲಿನ ಕೇಂದ್ರವನ್ನು ಇಟ್ಟುಕೊಂಡು, ತಮ್ಮ ಮಗನ ಕನಸನ್ನು ಸಾಕಾರಗೊಳಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.

ಒಟ್ಟಿನಲ್ಲಿ ಈಗಿನ ಕಾಲದಲ್ಲಿ ಪಬ್ ಜಿ,ಕಾರಟುನ್ ಅಂತಾ ಮನೆಯನ್ನು ಬಿಟ್ಟು ಹೊರಗೆ ಬರದೆ, ಮನೆಯಲ್ಲಿ ಇರುವಂಥ ಮಕ್ಕಳ ನಡುವೆ, ಸ್ಕೇಟಿಂಗ್‌ ನಲ್ಲಿ ಏನಾದ್ರು ಸಾಧಿಸಬೇಕು ಎಂಬ ಛಲ ಹೊಂದಿರುವ ಈ ಬಾಲಕನ ಕನಸು ನನಸ್ಸಾಗಲಿ ಎಂಬುದು ಎಲ್ಲರ ಆಶಯ.

Edited By : Nagesh Gaonkar
Kshetra Samachara

Kshetra Samachara

04/11/2020 10:15 am

Cinque Terre

21.87 K

Cinque Terre

7

ಸಂಬಂಧಿತ ಸುದ್ದಿ