ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಜಂಪ್ ರೋಪ್ ಕ್ರೀಡೆಯಲ್ಲಿ 23 ಚಿನ್ನದ ಪದಕ ಬಾಚಿದ ಕುಂದಣದ ಪ್ರತಿಭೆ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಶ್ರೀಧರ ಪೂಜಾರ

ಕುಂದಗೋಳ : ಪುರುಷನಷ್ಟೇ ಮಹಿಳೆಯರು ಆಧುನಿಕ ಕ್ಷೇತ್ರದಲ್ಲಿ ಹೊಸ ಹೊಸ ಸಾಧನೆಯ ಶಿಖರವೇರುತ್ತಾ ಎಲ್ಲ ಅಂಗಳಕ್ಕೂ ಕಾಲಿಟ್ಟು ತನ್ನದೇ ಆದ ಪ್ರತಿಭೆ ಮೆರೆಯುತ್ತಿದ್ದು ಆ ಸಾಲಿನಲ್ಲಿ ಇಲ್ಲೊಂದು ಪ್ರತಿಭೆ ತನ್ನ 19 ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶವನ್ನ ಪ್ರತಿನಿಧಿಸಿ ಭೇಷ್ ಎನಿಸಿಕೊಂಡಿದ್ದಾಳೆ.

ಅಂತಹ ಪ್ರತಿಭೆಯ ಹೆಸರೇ ಐಶ್ವರ್ಯ ರಾಜಶೇಖರ ಹುಬ್ಬಳ್ಳಿಮಠ ಮೂಲತಃ ಕುಂದಗೋಳ ಪಟ್ಟಣದ ಈಕೆ ತನ್ನ ಜಂಪ್ ರೋಪ್ ಕ್ರೀಡಾ ಸಾಧನೆಯ ಮೂಲಕ ಬರೋಬ್ಬರಿ 23 ಬಂಗಾರದ ಪದಕ 4 ಬೆಳ್ಳಿ ಪದಕ 2 ಕಂಚಿನ ಪದಕಗಳನ್ನು ಬಾಚಿಕೊಂಡು ತನ್ನ ಪದಕದ ಬೇಟೆಯನ್ನ ಮುಂದುವರೆಸಿದ್ದಾಳೆ.

ಪ್ರಾಥಮಿಕ ಶಾಲಾ ಹಂತದಲ್ಲೇ ಜಂಪ್ ರೋಪ್ ಕ್ರೀಡೆಯ ಮೂಲಕ ಗುರುತಿಸಿಕೊಂಡ ಈ ಪ್ರತಿಭೆ ತನ್ನ ಗುರು ಕಿರಣ್ ದೊಡ್ಡಮನಿ ಸಹಕಾರದಿಂದ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಆಟದ ಮೂಲಕವೇ ಹೆಸರು ಮಾಡಿದ್ದು ಹಾಂಕಾಂಗ್ ನಲ್ಲಿ ನಡೆದ ಏಷ್ಯನ್ ಜಂಪ್ ರೋಪ್ ಫೆಡರೇಷನ್ ಗೇಮ್ಸ್ ಭಾರತವನ್ನು ಪ್ರತಿನಿಧಿಸಿ ಒಂದು ಬೆಳ್ಳಿ ಪದಕ ಮತ್ತೊಂದು ಕಂಚಿನ ಪದಕ ಗಳಿಸಿದ್ದು ದೆಹಲಿ ಒಳಗೆ ಅಂತಾರಾಷ್ಟ್ರೀಯ ಮಟ್ಟದ ಜಂಪ್ ರೋಪ್ ಫೆಡರೇಷನ್ ಎರಡು ಬಂಗಾರದ ಪದಕ ಸೇರಿದಂತೆ ರಾಷ್ಟ್ರೀಯ ಮಟ್ಟದಲ್ಲಿ ಮಹಾರಾಷ್ಟ್ರ, 2 ಬಂಗಾರದ ಪದಕ, 2 ಬೆಳ್ಳಿ ಪದಕ, ಉತ್ತರಪ್ರದೇಶದಲ್ಲಿ 5 ಬಂಗಾರದ ಪದಕ, ತಮಿಳುನಾಡಿನಲ್ಲಿ 1 ಬೆಳ್ಳಿ 1 ಕಂಚು ಕೊರೊಳೊಡ್ಡಿದ್ದಾಳೆ.

ಬರೀ ಜಂಪ್ ರೋಪ್ ಕ್ರೀಡೆಯಷ್ಟೇ ಅಲ್ಲದೆ ಬಾಸ್ಕೆಟ್ ಬಾಲ್, ಥ್ರೋ ಬಾಲ್ ಪಂದ್ಯಗಳಲ್ಲೂ ಪದಕ ಬೇಟೆಯಾಡಿದ ಈ ಚಿನ್ನದ ಹುಡುಗಿ ಸದ್ಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಅಂಕಗಳಿಸಿ ಬಿಎಸ್ಸಿ ಅಗ್ರಿ ಪದವಿ ಓದಲು ಮುಂದಾಗಿದ್ದಾಳೆ.

Edited By : Nagesh Gaonkar
Kshetra Samachara

Kshetra Samachara

26/10/2020 11:35 am

Cinque Terre

38.54 K

Cinque Terre

13

ಸಂಬಂಧಿತ ಸುದ್ದಿ