ಧಾರವಾಡ : ಐಪಿಎಲ್ ಟೂರ್ನಿ ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸುತ್ತಿದೆ. ಇದರ ಮಧ್ಯೆ ಆರ್ ಸಿಬಿ ತಂಡ ಶನಿವಾರ ನಡೆಯುವ ಪಂದ್ಯದಲ್ಲಿ ಗೆಲುವು ಸಾಧಿಸಲಿ ಎಂದು ಧಾರವಾಡದ ಪ್ರಸಿದ್ಧ ನುಗ್ಗಿಕೇರಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ ದೇಣಿಗೆ ರಶೀದಿ ಇದೀಗ ವೈರಲ್ ಆಗಿದೆ.
ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯ ನಡೆಯುತ್ತಿದ್ದು, ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲಿ ಎಂದು ಅಭಿಮಾನಿಗಳು 101 ರೂಪಾಯಿಗಳ ಅಭಿಷೇಕ ಮಾಡಿಸಿದ್ದಾರೆ.
ಅಭಿಷೇಕದ ರಸೀದಿಯನ್ನು ವಿಶೇಷ ಅಂದ್ರೆ, ರಾಶಿ ಸ್ಥಳದಲ್ಲಿ ವಿರಾಟ್ ಕೊಹ್ಲಿ ಹೆಸರನ್ನು ಮತ್ತು ಗೋತ್ರದ ಸ್ಥಳದಲ್ಲಿ ಎಬಿಡಿ ಹೆಸರು ಹಾಕಲಾಗಿದೆ.
ಈ ರಸೀದಿ ವೈರಲ್ ಆಗಿದ್ದು, ಇದು ಸತ್ಯವೋ ಅಸತ್ಯವೋ ಎಂಬುದು ತಿಳಿದು ಬರಬೇಕಿದೆ.
Kshetra Samachara
10/10/2020 09:43 pm