ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರೈಲ್ವೆ ಸೇವೆಯಲ್ಲಿ ಆಧುನಿಕ ತಂತ್ರಜ್ಞಾನದ ಅಡಿಪಾಯಕ್ಕೆ ನಿರ್ಧಾರ: ಯೋಜನೆ ಅನುಷ್ಠಾನಕ್ಕೆ ವಿಎಸ್‌ವಿ ಪ್ರಸಾದ್ ಚಿಂತನೆ

ಹುಬ್ಬಳ್ಳಿ: ಯಾವ ದಾರಿ ಹಳ್ಳಿಯಿಂದ ಪಟ್ಟಣಕ್ಕೆ ಹೋಗುತ್ತದೆಯೋ ಅದೇ ದಾರಿ ಪಟ್ಟಣದಿಂದ ಹಳ್ಳಿಗೆ ಬರುತ್ತದೆ ಎಂಬ ಮಾತಿಗೆ ಸಾಕ್ಷಿ ಎಂಬಂತೆ ಡಾ. ವಿಎಸ್‌ವಿ ಪ್ರಸಾದ್ ಹೊಸ ಚಿಂತನೆಗೆ ಮುಂದಾಗಿದ್ದಾರೆ. ಭಾರತೀಯ ರೈಲ್ವೆಯಲ್ಲಿ ಹೊಸ ಸಂಚಲನ ಸೃಷ್ಟಿಸುವ ಮೂಲಕ ವಿನೂತನ ಸೇವೆ ನೀಡಲು ನಿರ್ಧಾರ ಮಾಡಿದ್ದು, ಮಹತ್ವದ ಕಾರ್ಯ ಸಾಧನೆಗೆ ದೇಶ- ವಿದೇಶಗಳಿಗೆ ಭೇಟಿ ನೀಡುವ ಮೂಲಕ ಯೋಜನೆ ಅನುಷ್ಠಾನಕ್ಕೆ ಅಡಿಪಾಯ ಹಾಕಲು ಮುಂದಾಗಿದ್ದಾರೆ.

ಸುಮಾರು ಮೂವತ್ತು ವರ್ಷಗಳ ಕಾಲ ರೈಲ್ವೆ ಇಲಾಖೆಯಲ್ಲಿ ಗುತ್ತಿಗೆದಾರರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಸ್ವರ್ಣಾ ಗ್ರೂಪ್ ಮಾಲೀಕರಾದ ಡಾ. ವಿಎಸ್‌ವಿ ಪ್ರಸಾದ್ ಈಗ ವಿದೇಶಿ ತಂತ್ರಜ್ಞಾನವನ್ನು ಭಾರತಕ್ಕೆ ತರುವ ಚಿಂತನೆ ನಡೆಸಿದ್ದಾರೆ. ಹೌದು... ಈಗಾಗಲೇ ಬೆರ್ಲಿನ್ ದೇಶದಲ್ಲಿ ನಡೆದ ಇನೋ ಟ್ರಾನ್ಸ್ 2022ರ ರೈಲ್ವೆ ಪ್ರದರ್ಶನಕ್ಕೆ ಭೇಟಿ ನೀಡಿ ಸಾಕಷ್ಟು ತಂತ್ರಜ್ಞಾನದ ಮಾಹಿತಿ ಪಡೆದಿದ್ದು, ಎಲೆಕ್ಟ್ರಾನಿಕ್, ಎಲೆಕ್ಟ್ರಿಕ್ ಹಾಗೂ ಟ್ರ್ಯಾಕ್ ಟೆಕ್ನಾಲಜಿಗೆ ಸಂಬಂಧಿಸಿದ ಆಧುನಿಕ ತಂತ್ರಜ್ಞಾನದ ಮಾಹಿತಿಯನ್ನು ಪಡೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ವಿದೇಶಿ ತಂತ್ರಜ್ಞಾನದ ಮೂಲಕ ಭಾರತೀಯ ರೈಲ್ವೆ ಅಭಿವೃದ್ಧಿ ಕಾರ್ಯಕ್ಕೆ ಮುನ್ನುಡಿ ಬರೆಯಲು ನಿರ್ಧಾರ ಮಾಡಿದ್ದಾರೆ.

ಇನ್ನೂ 1991ರಿಂದ ರೈಲ್ವೇ ಗುತ್ತಿಗೆ ಕಾಮಗಾರಿ ಮಾಡುವ ಮೂಲಕ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು, ಪ್ರಸ್ತುತವಾಗಿ ಅಡ್ವಾನ್ಸ್ಡ್ ಟೆಕ್ನಾಲಜಿಯನ್ನು ದೇಶದಲ್ಲಿ ಅನುಷ್ಠಾನ ಮಾಡಲು ನಿರ್ಧಾರ ಮಾಡಿದ್ದಾರೆ. ರೈಲ್ವೆ ಟ್ರ್ಯಾಕ್, ಎಲೆಕ್ಟ್ರಿಪಿಕೇಷನ್ ವರ್ಕ್, ಇಂಟರ್ ಲಾಕಿಂಗ್, ವೆಲ್ಡಿಂಗ್ ಟೆಕ್ನಾಲಜಿಯಲ್ಲಿ ಸಾಕಷ್ಟು ತಂತ್ರಜ್ಞಾನಗಳ ಅನುಭವವನ್ನು ಪ್ರದರ್ಶನದಲ್ಲಿ ಪಡೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಅಧುನಿಕ ಶೈಲಿಯ ತಂತ್ರಜ್ಞಾನ ಬಳಕೆ ಮಾಡಲು ನಿರ್ಧಾರ ಮಾಡಿದ್ದಾರೆ.

ಒಟ್ಟಿನಲ್ಲಿ ತಂತ್ರಜ್ಞಾನದ ಬಗ್ಗೆ ಸಾಕಷ್ಟು ಅನುಭವ ಪಡೆದುಕೊಂಡು ಬಂದಿರುವ ಡಾ.ವಿ.ಎಸ್.ವಿ ಪ್ರಸಾದ್ ಅವರಿಗೆ ರೈಲ್ವೆ ಇಲಾಖೆ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡುವ ಮೂಲಕ ಭಾರತೀಯ ರೈಲ್ವೆ ಅಭಿವೃದ್ಧಿಗೆ ಪೂರಕ ಅಡಿಪಾಯ ಹಾಕುವ ಕಾರ್ಯವನ್ನು ಮಾಡಬೇಕಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/10/2022 10:14 pm

Cinque Terre

74.53 K

Cinque Terre

4