ಹುಬ್ಬಳ್ಳಿ: ವಿದ್ಯುತ್ ಸರಬರಾಜು ಮೂಲಕ ಸಾಕಷ್ಟು ಜನಮನ್ನಣೆ ಪಡೆದಿರುವ ಹೆಸ್ಕಾಂ ಈಗ ಐಐಟಿ ಮಾಹಿತಿ ತಂತ್ರಜ್ಞಾನ ವಿನಿಮಯದ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಮತ್ತೊಂದು ವಿನೂತನ ಕಾರ್ಯದತ್ತ ಮುನ್ನಡೆಯುತ್ತಿದೆ.
ಹೌದು..ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಹಾಗೂ ಧಾರವಾಡ ಭಾರತೀಯ ಮಾಹಿತಿ ತಂತ್ರಜ್ಞಾನ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿದ್ದು, ತಂತ್ರಜ್ಞಾನದ ಸಮರ್ಪಕ ಬಳಕೆಗೆ ಹೆಸ್ಕಾಂ ಮುಂದಾಗಿದೆ. ಈಗಾಗಲೇ ಕೆಲವೊಂದು ಅವೈಜ್ಞಾನಿಕ ನಿಲುವುಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಹೆಸ್ಕಾಂ ಐಐಐಟಿ ಜೊತೆಗೆ ತಂತ್ರಜ್ಞಾನ ವಿನಿಮಯ ಮಾಡಲು ಹಾಗೂ ಸಾರ್ವಜನಿಕರಿಗೆ ಮತ್ತಷ್ಟು ಗುಣಮಟ್ಟದ ಸೇವೆಯನ್ನು ನೀಡಲು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಐಐಐಟಿ ನಿರ್ದೇಶಕ ಡಾ.ಕವಿ ಮಹೇಶ ಹಾಗೂ ಹೆಸ್ಕಾಂ ನಿರ್ದೇಶಕರಾದ ಡಿ.ಭಾರತಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು.
ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ವಿದ್ಯುತ್ ಸರಬರಾಜು ಮಾಡುವ ಮೂಲಕ ಹೆಸರು ಮಾಡಿರುವ ಹೆಸ್ಕಾಂ ಈಗ ಅಧುನಿಕ ತಂತ್ರಜ್ಞಾನದ ಸದ್ಬಳಿಕೆ ಮಾಡಿಕೊಂಡು ಬಿಲ್ಲಿಂಗ್, ಸಿಬ್ಬಂದಿ ವಿವರ, ಕಂದಾಯ ಸಂಗ್ರಹ ಹೀಗೆ ಹಲವಾರು ಕಾರ್ಯವನ್ನು ತಂತ್ರಜ್ಞಾನದ ಮೂಲಕ ಮಾಡಲು ಮುಂದಾಗಿದೆ.
ಒಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನದ ಸದ್ಬಳಿಕೆ ಮಾಡಿಕೊಂಡು ಹೆಸ್ಕಾಂ ಮತ್ತಷ್ಟು ಮುನ್ನಡೆಯಲು ಮುನ್ನುಡಿ ಬರೆದಿದ್ದು, ಹೆಸ್ಕಾಂ ಇಲಾಖೆ ಅಭಿವೃದ್ಧಿ ಜೊತೆಗೆ ಐಐಐಟಿ ಕಾರ್ಯವೈಖರಿ ಮತ್ತಷ್ಟು ಹೆಚ್ಚಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ.
Kshetra Samachara
23/07/2022 03:50 pm