ಹುಬ್ಬಳ್ಳಿ: ವಾಣಿಜ್ಯನಗರಿಯನ್ನು ಸ್ಟಾರ್ಟ್ ಅಪ್ ಹಬ್ ಆಗಿ ಮಾಡುವ ಸದುದ್ದೇಶದಿಂದ ವಿಜ್ಞಾನ ಹಾಗೂ ತಂತ್ರಜ್ಞಾನದ ಸದ್ಬಳಿಕೆ ಮಾಡಿಕೊಂಡು ಹೊಸ ಸಂಚಲನ ಸೃಷ್ಟಿಸುವ ಕಾರ್ಯಕ್ಕೆ ದೇಶಪಾಂಡೆ ಫೌಂಡೇಶನ್ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಟಾರ್ಟ್‌ಅಪ್ ಉತ್ತೇಜನಕ್ಕೆ ದೇಶಪಾಂಡೆ ಸ್ಟಾರ್ಟ್‌ಅಪ್ ಡೈಲಾಗ್ ಆಯೋಜನೆ ಮಾಡಲಾಗಿದ್ದು, ದೇಶದ ವಿವಿಧ ಮೂಲೆಯಿಂದ ನವೋದ್ಯಮಿಗಳು ಆಗಮಿಸಿ ಕಾರ್ಯಾಗಾರಕ್ಕೆ ಮೆರಗು ತಂದಿದ್ದಾರೆ.
ಸುಮಾರು ಮೂರು ವರ್ಷಗಳಿಂದ ಸಾರ್ವಜನಿಕರ ಧ್ವನಿಯಾಗಿ ಜನರ ಹಾಗೂ ಸರ್ಕಾರದ ನಡುವೆ ಸಂಪರ್ಕ ಕೊಂಡಿಯಾಗಿರುವ ಪಬ್ಲಿಕ್ ನೆಕ್ಸ್ಟ್ ಕೂಡ ದೇಶಪಾಂಡೆ ಸ್ಟಾರ್ಟ್‌ಅಪ್ ವಲಯದ ಅವಿಭಾಜ್ಯ ಅಂಗವಾಗಿದೆ. Join your neighborhood ಎಂಬುವಂತ ಘೋಷವಾಕ್ಯದಲ್ಲಿ ಜನರ ಸಮಸ್ಯೆಗಳ ಧ್ವನಿಯಾಗಿ ರಾಜ್ಯದ ನಾಲ್ಕು ಜಿಲ್ಲೆಯಲ್ಲಿ ಅಧಿಕೃತ ಕಾರ್ಯಾರಂಭ ಮಾಡಿದ್ದು, ರಾಜ್ಯಾದ್ಯಂತ ಎಲ್ಲ ವಲಯಗಳಲ್ಲಿ ಕೂಡ ಛಾಪನ್ನು ಮೂಡಿಸಿರುವ ಪಬ್ಲಿಕ್ ನೆಕ್ಸ್ಟ್, ಈಗ ಅಭಿವೃದ್ಧಿ ಪಥದೊಂದಿಗೆ ಮುನ್ನೆಡೆಯುತ್ತಿದ್ದು, ಈ ಕುರಿತು ಸಹಸಂಸ್ಥಾಪಕ ಮಂಜುನಾಥ ರಾವ್ ಅವರು ಕೂಡ ಇಂದಿನ ಸ್ಟಾರ್ಟ್‌ಅಪ್ ಡೈಲಾಗ್ ನಲ್ಲಿ ಪಬ್ಲಿಕ್ ನೆಕ್ಸ್ಟ್ ಕುರಿತು ನವ ಉದ್ಯಮಿಗಳಿಗೆ ಪರಿಚಯಿಸಿದರು.
ಇನ್ನೂ ಉದ್ಯಮಿಗಳಿಗೆ ತಮ್ಮ ಭವಿಷ್ಯದ ಕನಸಿಗೆ ಮತ್ತಷ್ಟು ನೀರುಣಿಸುವ ಕಾರ್ಯಾಗಾರಕ್ಕೆ ದೇಶಪಾಂಡೆ ಸ್ಟಾರ್ಟ್‌ಅಪ್ ಡೈಲಾಗ್ ಸಾಕ್ಷಿಯಾಗಿದ್ದು, ಜನರಲ್ಲಿ ಮತ್ತಷ್ಟು ಸಾಕ್ಷರತೆಯನ್ನು ಸೃಷ್ಟಿಸುವ ಹಾಗೂ ಸ್ಥಳೀಯ ಅಧಿಕಾರಿಗಳ ಹಾಗೂ ಆಡಳಿತಮಂಡಳಿಯ ಜೊತೆಗೆ ಜನರನ್ನು ಸಂಪರ್ಕಿಸುವ ಸದುದ್ದೇಶದಿಂದ ಪಬ್ಲಿಕ್ ನೆಕ್ಸ್ಟ್ ಕಾರ್ಯನಿರ್ವಹಿಸುತ್ತಿದ್ದು, ಪಬ್ಲಿಕ್ ನೆಕ್ಸ್ಟ್ ಕಾರ್ಯಕ್ಕೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/06/2022 04:44 pm