ಹುಬ್ಬಳ್ಳಿ: ಈಗೇನಿದರೂ ಮೊಬೈಲ್ ಮೇನಿಯಾ. ಇಂದು ಹೊಸತೊಂದು ಮೊಬೈಲ್ ಫೋನ್ ಮಾರುಕಟ್ಟೆಗೆ ಬಂದಿದೆ ಅಂದ್ರೆ ಸ್ವಲ್ಪ ದಿನಗಳಲ್ಲೇ ಅದರ ಅಪ್ಡೇಟೆಡ್ ವರ್ಶನ್ ಬಂದುಬಿಡುತ್ತೆ. ಯಾಕಂದ್ರೆ ಈಗ ತಾಂತ್ರಿಕತೆ ಆ ಲೆವೆಲ್ಲಿಗೆ ಬೆಳೆದುಬಿಟ್ಟಿದೆ.
ಮೊಬೈಲ್ ಫೋನ್ ನಲ್ಲಿ ವೆರೈಟಿ ಬಯಸುವ ಕೋಟ್ಯಾಂತರ ಗ್ರಾಹಕರು ಇದ್ದಾರೆ. ತಮ್ಮ ಎಲ್ಲ ಕೆಲಸಗಳು ಮೊಬೈಲ್ ಫೋನ್ ನಲ್ಲೇ ಅಗಬೇಕು. ಬಳಸಲು ರಿಚ್ ಅನುಭವ ಆಗಬೇಕು ಎಂದು ಅವರು ಬಯಸುತ್ತಾರೆ. ಅದರಲ್ಲೂ ಐ ಫೋನ್ ಅಂದ್ರೆ ಎಲ್ಲರೂ ಕಣ್ಣಗಲಿಸಿ ಬೆರಗಾಗುತ್ತಾರೆ. ಅಂತವರಿಗಾಗಿಯೇ ಈಗ ಆಪಲ್ ಐ ಫೋನ್ ಕಂಪನಿಯು ತನ್ನ 13 ನೇ ವರ್ಶನ್ ಅನ್ನು ರಿಲೀಸ್ ಮಾಡಿದೆ. ಸದ್ಯ ಹುಬ್ಬಳ್ಳಿಯ ವಿದ್ಯಾನಗರದ ಶ್ರೀ ರಾಜೇಂದ್ರ ಕಮ್ಯುನಿಕೇಷನ್ಸ್ ನ ಐ ಸೆಂಟರ್ ನಲ್ಲಿ ಇದರ ಹವಾ ಸೃಷ್ಟಿಯಾಗಿದೆ. ಲಾಂಚ್ ಆದ ಮೊದಲ ದಿನವೇ ಸುಮಾರು 40 ಗ್ರಾಹಕರು ಈ ಫೋನ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
ಐ ಫೋನ್ ಸಿರೀಸ್ 13ನಲ್ಲಿ ಅಡ್ವಾನ್ಸ್ಡ್ ಟೆಕ್ನಾಲಜಿ ಇದೆ. ಈ ಬಾರಿ ಒಂದು ಟಿಬಿ ಸಾಮರ್ಥ್ಯದೊಂದಿಗೆ ಬಿಡುಗಡೆಯಾಗಿದೆ. ಹೀಗಾಗಿ ಹೆಚ್ಚು ವಿಡಿಯೋ ಫೋಟೋಗಳನ್ನು ಸೇವ್ ಮಾಡಿಟ್ಟುಕೊಳ್ಳುವವರಿಗೆ ಇದು ಅನುಕೂಲಕರವಾಗಿದೆ. ಉತ್ಕೃಷ್ಟ ಗುಣಮಟ್ಟದ ಕ್ಯಾಮೆರಾ ಇರುವುದರಿಂದ ಉತ್ತಮ ಕ್ವಾಲಿಟಿಯ ವಿಡಿಯೋಗಳನ್ನು ಈ ಕ್ಯಾಮೆರಾದಲ್ಲಿಯೇ ಮಾಡಬಹುದಾಗಿದೆ. ಇನ್ನು ಮೊದಲ ದಿನವೇ 13 ನೇ ಸಿರೀಸ್ ಐ ಫೋನನ್ನು ತಮ್ಮದಾಗಿಸಿಕೊಂಡ ಸಂತುಷ್ಟ ಗ್ರಾಹಕರು ಏನೆಲ್ಲ ಹೇಳಿದ್ದಾರೆ ಬನ್ನಿ ಕೇಳೋಣ.
ಮೊಬೈಲ್ ಫೋನ್ ಖರೀದಿಸುವವರು ಯಾವಾಗಲೂ ಧೀರ್ಘ ಬಾಳಿಕೆ ಮತ್ತು ಉತ್ತಮ ಗುಣಮಟ್ಟದ ಬಗ್ಗೆ ವಿಚಾರಿಸುತ್ತಾರೆ. ಈ ನಿಟ್ಟಿನಲ್ಲಿ ಐ ಫೋನ್ ಕಂಪನಿಯ ಯಾವುದೇ ಫೋನ್ ಗಳ ಬಗ್ಗೆ ಡೌಟೇ ಇಲ್ಲ. ಆರಂಭದಲ್ಲಿಯೇ ಈ ಮಟ್ಟಿಗೆ ಬೇಡಿಕೆ ಇದೆ. ಇನ್ನು ಮುಂಬರುವ ದಿನಗಳಲ್ಲಿ ಈ ಫೋನ್ ಬೇಕಾದರೆ ಮೊದಲೇ ಬುಕ್ ಮಾಡಬೇಕು ಅಂತಾರೆ ಶ್ರೀ ರಾಜೇಂದ್ರ ಕಮ್ಯುನಿಕೇಷನ್ಸ್ ಐ ಸೆಂಟರ್ ಮುಖ್ಯಸ್ಥ ನಿಖಿಲ್ ಜೈನ್..
Kshetra Samachara
24/09/2021 06:08 pm