ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಹೊಸ ಹೊಸ ಪ್ರಯೋಗಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.ಹವಮಾನ ವೈಪರೀತ್ಯಗಳ ನಡುವೆ ವಿಮಾನ ಲ್ಯಾಂಡಿಂಗ್ ಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಶೇಷ ಪ್ರಯತ್ನವೊಂದನ್ನು ಕೈಗೆತ್ತಿಕೊಂಡಿದೆ.
ಹೌದು.. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಐಎಲ್‌ಎಸ್(ಇನ್ಸ್‌ಟ್ರೂಮೆಂಟಲ್ ಲ್ಯಾಂಡಿಂಗ್ ಸಿಸ್ಟಮ್) ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಬಹುತೇಕ ನವೆಂಬರ್‌ನಿಂದ ಕಾರ್ಯಾರಂಭ ಮಾಡಲಿದೆ.
ಮೋಡಗಳು, ವಿಪರೀತ ಮಳೆ ರೀತಿಯಲ್ಲಿ ಹವಾಮಾನ ವೈಪರಿತ್ಯ ಎದುರಾದರೆ ರನ್‌ವೇ ಗೋಚರ ಆಗುವವರೆಗೆ ವಿಮಾನ ಆಕಾಶದಲ್ಲಿ ಸುತ್ತಬೇಕಾಗುತ್ತದೆ. ಅಥವಾ ಸಮೀಪದ ನಿಲ್ದಾಣದಲ್ಲಿ ವಿಮಾನ ಇಳಿಸಬೇಕಾಗುತ್ತದೆ.ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಸರಳವಾಗಿ ನಿಭಾಯಿಸಲು ಐಎಲ್‌ಎಸ್‌ನಿಂದ ವ್ಯವಸ್ಥೆ ಕಲ್ಪಿಸಲಾಗಿದೆ.
ಐಎಲ್‌ಎಸ್ ನೆಲಮಟ್ಟದಿಂದ ಕಾರ್ಯನಿರ್ವಹಿಸುವ ರೇಡಾರ್ ಆಧರಿತ ತಂತ್ರಜ್ಞಾನ. ರನವೇ ಸನಿಹ ಶೆಡ್ ಒಂದು ಭಾಗವಾಗಿದ್ದು, ಇದು ಹವಾಮಾನ ವೈಪರಿತ್ಯದ ನಡುವೆಯೂ ವಿಮಾನ ರನ್‌ವೇನಲ್ಲಿ ಲ್ಯಾಂಡ್ ಆಗುವಂತೆ ತರಂಗ ಸಂದೇಶ ನೀಡುತ್ತದೆ. ಇನ್ನೊಂದು, ರನ್‌ವೇಯ ಪಕ್ಕದಲ್ಲಿಯೆ ಸ್ಥಾಪಿಸಲಾದ ತರಂಗ ಸ್ತಂಭ(ಆ್ಯಂಟೆನಾ ) ವಿಮಾನವನ್ನು ರನ್‌ವೇಯ ಮಧ್ಯಭಾಗಕ್ಕೆ ವಿಮಾನ ಹೋಗುವಂತೆ ಲೈಟಿಂಗ್, ತರಂಗ ಸಂದೇಶ ರವಾನಿಸುತ್ತ ಸಹಕರಿಸುತ್ತದೆ. ಆಗಸದಿಂದ ರನ್‌ವೇ ಕಾಣದೆ ಇದ್ದರೂ ತರಂಗಗಳ ಸಂದೇಶದ ಸಹಕಾರದಿಂದ ವಿಮಾನಗಳನ್ನು ಲ್ಯಾಂಡ್ ಮಾಡಬಹುದು. ಒಂದು ವೇಳೆ ವಿಮಾನ ಜಾರಿ ಆ್ಯಂಟಿನಾಕ್ಕೆ ತಾಕಿದರೂ ಲಘುವಾಗಿರುವ ಇವುಗಳು ಬೀಳುತ್ತವೆ ವಿನಃ ವಿಮಾನಕ್ಕೆ ಹಾನಿ ಆಗಲಾರದು.
Kshetra Samachara
18/09/2020 12:43 pm