ಧಾರವಾಡ: ಧಾರವಾಡದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ಕಾಲೇಜಿನ ಶತಮಾನೋತ್ಸವದ ಸವಿನೆನಪಿಗಾಗಿ ನೂತನವಾಗಿ ನಿರ್ಮಿಸಲಾಗಿರುವ ಪ್ರಾಣಿಶಾಸ್ತ್ರ ವಸ್ತುಸಂಗ್ರಹಾಲಯ ಕಟ್ಟಡವನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ
ಕೆ.ಬಿ.ಗುಡಸಿ ಉದ್ಘಾಟಿಸಿದರು.
ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಎ.ಎಸ್.ಬೆಲ್ಲದ ಮಾತನಾಡಿ, ಈ ವಸ್ತು ಸಂಗ್ರಹಾಲಯವನ್ನು1947 ರಲ್ಲಿ ಪ್ರಾರಂಭಿಸಲಾಯಿತು, ಇಲ್ಲಿ ಸುಮಾರು 2,500 ಸ್ಪೀಸೀಸ್ ತಳಿಗಳು ಇವೆ. ಕೆಸಿಡಿ ಪ್ರಾಣಿವಸ್ತು ಸಂಗ್ರಹಾಲಯ 1947 ರಿಂದ ಇಲ್ಲಿಯವರೆಗೂ ಭೇಟಿ ನೀಡಿದ ಸಮಾಜದ ಎಲ್ಲ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ, ಪ್ರಾಧ್ಯಾಪಕರಿಗೆ ಹಾಗೂ ಎಲ್ಲ ಸಾರ್ವಜನಿಕರಿಗೆ ಪ್ರಕೃತಿ, ಪ್ರಾಣಿ, ಪಕ್ಷಿಗಳ ಬಗ್ಗೆ ವಿಶೇಷವಾದ ಆಳ ಜ್ಞಾನವನ್ನು ತುಂಬುತ್ತಿದೆ. ಎಲ್ಲ ವರ್ಗದ ಜನರು ಪ್ರಾಣಿವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ತಮ್ಮ ಜ್ಞಾನವನ್ನು ಇನ್ನಷ್ಟು ಹೆಚ್ಚು ಬೆಳೆಸಿಕೊಂಡು ಹೋಗುತ್ತಾರೆ. ಪ್ರತಿನಿತ್ಯ ಇಲ್ಲಿ ಅನೇಕ ವಿದ್ಯಾರ್ಥಿಗಳು ಭೇಟಿ ನೀಡಿ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದರು.
Kshetra Samachara
23/12/2021 09:14 pm