ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿದ್ಯಾಕಾಶಿಯಲ್ಲಿ ಯುವ ವಿಜ್ಞಾನಿಗಳ ಕಲರವ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಅವರದ್ದು ಇನ್ನೂ ಆಡಿ ನಲಿಯುವ ವಯಸ್ಸು.. ಆದರೆ, ಏನಾದರೊಂದು ಸಾಧನೆ ಮಾಡಬೇಕೆಂಬ ತವಕ. ಅವರ ಕಣ್ಣಲ್ಲಿ ದೇಶದ ಭಾವೀ ವಿಜ್ಞಾನಿಗಳಾಗಿ ಹೊರಹೊಮ್ಮುವ ಹೊಳಪು.. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ವಿದ್ಯಾಕಾಶಿ ಧಾರವಾಡ.

ಧಾರವಾಡದ ನೌಕರರ ಭವನದಲ್ಲಿ ಶ್ರೀಸಾಯಿ ಪದವಿಪೂರ್ವ ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಹೊಂಬೆಳಕು ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ವಿಜ್ಞಾನ ವಿಸ್ಮಯ ಎಂಬ ವಿಜ್ಞಾನ ಮಾದರಿಗಳ ಪ್ರದರ್ಶನ ಅಕ್ಷರಶಃ ಎಲ್ಲರ ಗಮನಸೆಳೆಯಿತು.

ಪ್ರತಿಭೆ ಇರುವ ಮಕ್ಕಳಿಗಾಗಿ ಹಾಗೂ ಅವರಲ್ಲಿರುವ ಹೊಸ ಹೊಸ ಆಲೋಚನೆಗಳು, ಆವಿಷ್ಕಾರಗಳನ್ನು ಬೆಳಕಿಗೆ ತರುವ ಉದ್ದೇಶದಿಂದಲೇ ಈ ವಿಜ್ಞಾನ ಮಾದರಿ ಪ್ರಯೋಗಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಬೈಲಹೊಂಗಲ, ರಾಣೆಬೆನ್ನೂರು, ಧಾರವಾಡ, ಗದಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಮಕ್ಕಳು ತಾವು ಸಿದ್ಧಪಡಿಸಿದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ ಕಾರ್ಯಕ್ರಮ ಆಯೋಜಕರ ಹಾಗೂ ನಿರ್ಣಾಯಕರ ಗಮನಸೆಳೆದರು.

ಡ್ರೋಣ್ ಕ್ಯಾಮೆರಾ, ಬಾರ್ಡರ್‌ಗಳಲ್ಲಿ ವಿರೋಧಿಗಳು ನುಸುಳುವುದನ್ನು ಪತ್ತೆಹಚ್ಚುವ ಅಲಾರಾಮ್, ಮಳೆಯನ್ನು ಗುರುತಿಸುವ ಮಾಪಕ, ಸಿಗರೇಟ್‌ನಿಂದಾಗುವ ದುಷ್ಪರಿಣಾಮ ಪತ್ತೆಹಚ್ಚುವ ಸಾಧನ ಹೀಗೆ ಹತ್ತು ಹಲವಾರು ವಿಜ್ಞಾನ ಮಾದರಿಗಳನ್ನು ಪ್ರದರ್ಶನಕ್ಕೆ ತಂದಿದ್ದ ವಿದ್ಯಾರ್ಥಿಗಳು ಅವುಗಳ ಬಗ್ಗೆ ವಿಶ್ಲೇಷಣೆ ಮಾಡಿ ಗಮನಸೆಳೆದರು. ಈ ಕಾರ್ಯಕ್ರಮದ ಬಗ್ಗೆ ಆಯೋಜಕರಾದ ಡಾ.ವೀಣಾ ಬಿರಾದಾರ ಏನು ಹೇಳಿದ್ದಾರೆ ಕೇಳೋಣ ಬನ್ನಿ

ಬಾರ್ಡರ್‌ಗಳಲ್ಲಿ ವಿರೋಧಿಗಳು ನುಸುಳದಂತೆ ಯಾವ ರೀತಿ ತಡೆಯಬಹುದು ಎಂಬುದರ ಕುರಿತು ಧಾರವಾಡದ ಕೆಎಲ್‌ಇ ಸ್ಕೂಲ್‌ನ ಬನಶ್ರೀ ಎಂಬ ವಿದ್ಯಾರ್ಥಿನಿ ಸಿದ್ಧಪಡಿಸಿದ ಅಲಾರಾಮ್‌ ಗಮನಸೆಳೆಯಿತು.

ಪ್ರೊ.ನಾಗರಾಜ ಶಿರೂರ ಹಾಗೂ ಸಿಬ್ಬಂದಿ ಮುಂದಾಳತ್ವದಲ್ಲಿ ನಡೆದ ಈ ವಿಜ್ಞಾನ ಮಾದರಿಗಳ ಪ್ರದರ್ಶನ ಎಲ್ಲರ ಗಮನಸೆಳೆಯಿತಲ್ಲದೇ ಯುವ ವಿಜ್ಞಾನಿಗಳಿಗೆ ಒಳ್ಳೆಯ ವೇದಿಕೆ ಕಲ್ಪಿಸಿಕೊಟ್ಟಿದ್ದಂತೂ ಸುಳ್ಳಲ್ಲ.

Edited By : Nagesh Gaonkar
Kshetra Samachara

Kshetra Samachara

20/12/2021 10:51 pm

Cinque Terre

56.64 K

Cinque Terre

5

ಸಂಬಂಧಿತ ಸುದ್ದಿ