ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸರ್ಕಾರಿ ಶಾಲಾ ಮಕ್ಕಳ ಸಾಧನೆಯನ್ನೊಮ್ಮೆ ನೋಡಿ

ಧಾರವಾಡ: ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವವರೇ ಹೆಚ್ಚು. ಸರ್ಕಾರಿ ಶಾಲೆಯ ಮಕ್ಕಳ ಸಾಧನೆ ಶೂನ್ಯ ಎಂಬ ಮಾತನ್ನೂ ಹೇಳುವವರು ಅನೇಕ. ಆದರೆ, ಇದರ ಮಧ್ಯೆ ಧಾರವಾಡ ತಾಲೂಕಿನ ಗ್ರಾಮವೊಂದರ ಸರ್ಕಾರಿ ಶಾಲಾ ಮಕ್ಕಳು ತಮ್ಮದೇ ಬುದ್ಧಿವಂತಿಕೆ ಬಳಸಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಗಮನಸೆಳೆದಿದ್ದಾರೆ.

ಹೌದು! ಹೀಗೆ ಜೆಸಿಬಿ, ಬುಡಸಮೇತ ಮರವನ್ನು ಕೀಳುವ ಯಂತ್ರದ ಪ್ರಾತ್ಯಕ್ಷಿಕೆ ತೋರಿಸುತ್ತಿರುವ ಮಕ್ಕಳು ಧಾರವಾಡ ತಾಲೂಕಿನ ಮಾಧನಬಾವಿ ಗ್ರಾಮದ ಸರ್ಕಾರಿ ಶಾಲಾ ಮಕ್ಕಳು.

ಸಾಮಾನ್ಯವಾಗಿ ಖಾಸಗಿ ಶಾಲಾ ಮಕ್ಕಳಿಗೆ ಈ ರೀತಿಯ ಪ್ರಾತ್ಯಕ್ಷಿಕೆಗಳನ್ನು ಹೆಚ್ಚೆಚ್ಚು ಮಾಡಿಸಿ, ಹೊಸ ಆವಿಷ್ಕಾರಕ್ಕೆ ಮಕ್ಕಳನ್ನು ಅಣಿಗೊಳಿಸಲಾಗುತ್ತದೆ. ಆದರೆ, ಸರ್ಕಾರಿ ಶಾಲಾ ಮಕ್ಕಳೂ ಈ ರೀತಿಯ ಪ್ರಯೋಗ ಮಾಡಿರುವುದರಿಂದ ಶಿಕ್ಷಕರೇ ನಿಬ್ಬೆರಗಾಗಿದ್ದಾರೆ.

ರಟ್ಟು, ಸಿರೆಂಜ್, ಜಾತ್ರೆಯಲ್ಲಿನ ಸಾಮಾನು ಇತ್ಯಾದಿಗಳನ್ನು ಬಳಕೆ ಮಾಡಿ ಮಕ್ಕಳು ಜೆಸಿಬಿ, ಬುಡ ಸಮೇತ ಮರ ಕೀಳುವ ಯಂತ್ರಗಳ ಪ್ರಾತ್ಯಕ್ಷಿಕೆ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬಿಬ್ಬರು ವಿದ್ಯಾರ್ಥಿಗಳು ಸೇರಿಕೊಂಡು ತಮ್ಮ ಬುದ್ಧಿ ಓಡಿಸಿ ಈ ರೀತಿಯ ಪ್ರಾತ್ಯಕ್ಷಿಗೆಳನ್ನು ಮಾಡಿ ಗಮನಸೆಳೆದಿರುವುದು ವಿಶೇಷ. ಸರ್ಕಾರಿ ಶಾಲಾ ಮಕ್ಕಳು ಖಾಸಗಿ ಶಾಲಾ ಮಕ್ಕಳಿಗಿಂತಲೂ ಜಾಣರು ಎಂಬುದನ್ನು ಈ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

20/10/2021 10:27 pm

Cinque Terre

58.3 K

Cinque Terre

16

ಸಂಬಂಧಿತ ಸುದ್ದಿ