ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶಿಸ್ತಿನ ಸಿಪಾಯಿಗಳಂತೆ ಪಥ ಸಂಚಲನ ನಡೆಸಿದ ರಾಷ್ಟ್ರೀಯ ಸ್ವಯಂ ಸೇವಕರು

ಹುಬ್ಬಳ್ಳಿ: ಅದು ವಿಜಯದಶಮಿಯ ಅಂಗವಾಗಿ ನಡೆದ ಬೃಹತ್ ಪಥ ಸಂಚಲನ. ಹಿಂದುತ್ವಕ್ಕೆ ಪೂರಕವಾಗಿದ್ದ ಅದೊಂದು ಆಚರಣೆ ಹುಬ್ಬಳ್ಳಿಯಲ್ಲಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಗಣವೇಶ ಧರಿಸಿದ ಆರ್.ಎಸ್.ಎಸ್ ಕಾರ್ಯಕರ್ತರು ರಾಷ್ಟ್ರಪ್ರೇಮ ಎತ್ತಿ ಹಿಡಿದಿದ್ದರೇ ಮುಸ್ಲಿಂ ಸಮುದಾಯದ ಜನರು ಸೌಹಾರ್ದತೆಯ ಸಂಕೇತಕ್ಕೆ ಸಾಕ್ಷಿಯಾಗಿದ್ದಾರೆ.

ರಾಜ್ಯದ ಎರಡನೇ ಅತಿದೊಡ್ಡ ಮಹಾನಗರವಾಗಿರುವ ಹುಬ್ಬಳ್ಳಿಯಲ್ಲಿ. ಆರ್‌ಎಸ್‌ಎಸ್‌ನಿಂದ ಬೃಹತ್ ಪಥ ಸಂಚಲನ ಹಮ್ಮಿಕೊಳ್ಳಲಾಗಿದ್ದು, ಹಿಂದೂ ಮುಸ್ಲಿಂ ಭಾಯ್ ಭಾಯ್ ಎಂಬುವಂತ ಸಂದೇಶಕ್ಕೆ ಸಾಕ್ಷಿಯಾಗಿದೆ. ಹೌದು.. ವಿಜಯದಶಮಿ ಹಿನ್ನಲೆ ಆರ್.ಎಸ್.ಎಸ್ ಪಥ ಸಂಚಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ನೆಹರೂ ಮೈದಾನಿಂದ ಹೊರಟ ಪಥ ಸಂಚಲನ ಹುಬ್ಬಳ್ಳಿಯ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಮತ್ತೇ ನೆಹರು ಮೈದಾನದ ಸೇರಿತು. ಪಥ ಸಂಚಲನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಕ್ಕರೆ ಸಚಿವ ಶಂಕರ್ ಪಾಟೀಲ್ ಮನೇನಕೊಪ್ಪ ಗಣವೇಶ ತೊಟ್ಟು ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗಿಯಾದರು.

ನೆಹರೂ ಮೈದಾನದಿಂದ ಕೃಷ್ಣಭವನ, ಕಂಬಳಿ ಮಾರ್ಗ, ಸಂಗೊಳ್ಳಿ ರಾಯಣ್ಣ ವೃತ್ತ ದಾಜಿಬಾನ್ ಪೇಟೆಯಲ್ಲಿ ಪಥ ಸಂಚಲನ ಸಾಗಿತು. ನಗರದ ಪ್ರಮುಖ ಬೀದಿಗಳಲ್ಲಿ ಗಣವೇಶ ತೊಟ್ಟು ಕೇಂದ್ರ ಸಚಿವರು ಪಥ ಸಂಚಲನದಲ್ಲಿ ಭಾಗಿಯಾಗಿದ್ರು. ಇನ್ನು ಪಥ ಸಂಚಲನ ಆರಂಭಕ್ಕೂ ಮುನ್ನವೇ ಮುಸ್ಲಿಂ ಮುಖಂಡರು ಮೈದಾನದತ್ತ ಬಂದಿದ್ದು ವಿಶೇಷವಾಗಿತ್ತು.‌ ಮುಸ್ಲಿಂ‌ ಮುಖಂಡರು ಮೆರವಣಿಗೆ ಹೊರಟ ಟ್ರ್ಯಾಕ್ಟರ್ ನಲ್ಲಿದ್ದ ಆರ್.ಎಸ್.ಎಸ್ ಪ್ರಮುಖರ ಭಾವಚಿತ್ರಕ್ಕೆ ಹೂ ಹಾಕಿ ಪಥ ಸಂಚಲನಕ್ಕೆ ಕೈ ಜೋಡಿಸಿದ್ರು. ಈ ಮೂಲಕ ಹಿಂದೂ ಮುಸ್ಲಿಂ ಭಾಯ್ ಭಾಯ್ ಎನ್ನುವುದನ್ನು ಮುಸ್ಲಿಂ ಮುಖಂಡರು ತೋರಿಸಿದ್ದು, ಮುಸ್ಲಿಂ ಮುಖಂಡರು ಭಾವಚಿತ್ರಕ್ಕೆ ಹೂವು ಹಾಕುವ ವೇಳೆ ಆರ್.ಎಸ್.ಎಸ್ ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು.

ಒಟ್ಟಿನಲ್ಲಿ ಹುಬ್ಬಳ್ಳಿನಗರದಲ್ಲಿ ಶಿಸ್ತಿನ ಸಿಪಾಯಿಯಂತೆ ಸಂಚರಿಸಿ ನೆಹರೂ ಮೈದಾನದಲ್ಲಿ ಪಥ ಸಂಚಲನದ ಪ್ರಾರ್ಥನೆ ,ಸೇರಿದಂತೆ ಸಂಘದ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾದ್ದರು. ಇನ್ನೂ ಚಿಕ್ಕ ಮಕ್ಕಳು ಕೂಡಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದು, RSS ಹಾಗೂ ಮುಸ್ಲಿಂ ಸಮುದಾಯದ ಎರಡು ಮೆರವಣಿಗೆಗಳು ಒಂದೇ ದಿನ ಇದ್ದ ಕಾರಣ ನಗರದಲ್ಲಿ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋ ಬಸ್ತ ಕಲ್ಪಿಸಲಾಗಿತ್ತು.

Edited By : Nagesh Gaonkar
Kshetra Samachara

Kshetra Samachara

09/10/2022 07:46 pm

Cinque Terre

35.7 K

Cinque Terre

9

ಸಂಬಂಧಿತ ಸುದ್ದಿ