ಕುಂದಗೋಳ: ನವರಾತ್ರಿ ಸಂಪನ್ನದಿನದ ಅಂಗವಾಗಿ ಗುಡಗೇರಿ ದ್ಯಾಮವ್ವನಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಸೇಬು ಹಣ್ಣಿನ ಹಾರ ಸಮರ್ಪಿಸಿ ಭಕ್ತರು ತಮ್ಮ ಭಕ್ತಿ ಸೇವೆ ಸಲ್ಲಿಸಿದ್ದಾರೆ.
ನವರಾತ್ರಿ ಅಂಗವಾಗಿ ತಾಯಿ ದ್ಯಾಮವ್ವದೇವಿ ಎಂಟು ದಿನ ವಿಧ ವಿಧದ ಎಂಟು ಅವತಾರಗಳಲ್ಲಿ ಭಕ್ತರಿಗೆ ದರ್ಶನ ನೀಡಿದ್ದು, ಇಂದು ಕಡು ನೆರಳೇ ಬಣ್ಣದ ಸಿರೇಯ ಹೂಗಳ ವಿಶೇಷ ಅಲಂಕಾರದಲ್ಲಿ ಭಕ್ತ ಸಂಕುಲಕ್ಕೆ ಒಂಭತ್ತನೇ ದಿನದ ದರ್ಶನ ಕೊಟ್ಟಿದ್ದಾಳೆ.
ಸದ್ಯ ನವರಾತ್ರಿ ಸಂಪನ್ನದಿನದ ಅಂಗವಾಗಿ ಗುಡಗೇರಿ ದ್ಯಾಮವ್ವದೇವಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕೂಡ ಮಾಡಲಾಗಿದ್ದು, ಭಕ್ತ ಜನತೆ ತಾಯಿ ದರ್ಶನ ಪಡೆದು ಪ್ರಸಾದ ಪಡೆದು ಪುನೀತರಾಗುತ್ತಿದ್ದಾರೆ.
ಇಂದು ನಸುಕಿನ ಜಾವದಿಂದಲೇ ತಾಯಿ ದ್ಯಾಮವ್ವ ದೇವಿಯ ದರ್ಶನವನ್ನು ಮಹಿಳಾ ಭಕ್ತರು ಪಡೆಯುತ್ತಿದ್ದು, ದೇವಸ್ಥಾನ ಟ್ರಸ್ಟ್ ಕಮೀಟಿ ಸಹ ವಿಶೇಷವಾಗಿ ದೇವಸ್ಥಾನ ದೀಪಗಳ ಅಲಂಕಾರದಿಂದ ಶೃಂಗರಿಸಿದ್ದು ಇಂದು ಸಂಜೆ ಪಲ್ಲಕ್ಕಿ ಉತ್ಸವ ನಡೆಯಲಿದೆ.
Kshetra Samachara
04/10/2022 06:36 pm