ಹುಬ್ಬಳ್ಳಿ: ನವರಾತ್ರಿ ಹಬ್ಬದ ವಿಶೇಷವಾಗಿ ಎಲ್ಲಿ ನೋಡಿದರು ಕೆಂಪು ಉಡುಪಿನ ಸುಮಂಗಲೆಯರು. ನವರಾತ್ರಿ ದುರ್ಗೆಯರ ಭಕ್ತಿ ಗೀತೆಗಳ ಜೈಂಕಾರ... ಇನ್ನೊಂದೆಡೆ ದಸರಾ ಹಬ್ಬದ ಅಂಗವಾಗಿ ಮಂಗಳಾರತಿ ಪುಸ್ತಕ ಬಿಡುಗಡೆ ಸಮಾರಂಭ. ಇಷ್ಟೆಲ್ಲಾ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು ಸಮಾಜ ಸೇವಕ ನಾಗರಾಜ ಪಟ್ಟಣ ಅವರ ನೇತೃತ್ವದಲ್ಲಿ.
ವಾಣಿಜ್ಯ ನಗರಿ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಗೋಕುಲ್ ಗಾರ್ಡನ್‌ನಲ್ಲಿ ವಿದ್ಯಾನಗರ ಮಿತ್ರಮಂಡಳಿ ಸಂಸ್ಥಾಪಕ ಅಧ್ಯಕ್ಷರು ಮತ್ತು ಹು-ಧಾ ಮಹಾನಗರ ಚಿಕನ್ ವ್ಯಾಪಾರಸ್ಥರ ಸಂಘದ ಗೌರವ ಅಧ್ಯಕ್ಷ ನಾಗರಾಜ್ ಪಟ್ಟಣ ಹಾಗೂ ಮಿತ್ರ ವೃಂದದ ವತಿಯಿಂದ ಮಂಗಳಾರತಿ ಪುಸ್ತಕ ಬಿಡುಗಡೆ ಸಮಾರಂಭ-೨೦೨೨ ಹಾಗೂ ಶ್ರೀಮತಿ ಅಶ್ವಿನಿ ನಾಗರಾಜ್ ಪಟ್ಟಣ ಅವರಿಂದ ಸುಮಂಗಲಿಯರಿಗೆ ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮ ಜರುಗಿತು.
ನಾಗರಾಜ್ ಪಟ್ಟಣ ಅವರು ತಮ್ಮ ಉದ್ಯಮದ ಜೊತೆಗೆ ಸತತವಾಗಿ 7 ವರ್ಷಗಳವರೆಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ತುಡಿತ ಹೊಂದಿರುವ ಇವರಿಗೆ, ಎಸ್.ಎಸ್.ಕೆ ಸಮಾಜದ ಸಹಕಾರದಿಂದ ಪ್ರತಿವರ್ಷ ಉತ್ತಮ ಧಾರ್ಮಿಕ ಕಾರ್ಯಗಳನ್ನು ಆಯೋಜಿಸುವ ಮೂಲಕ ಎಸ್.ಎಸ್.ಕೆ ಸಮಾಜದ ಮಹತ್ವ ಸಾರಿದ್ದಾರೆ.
ಇನ್ನು ನಾಗರಾಜ ಪಟ್ಟಣ ಅವರ ಈ ಸಮಾಜಮುಖಿ ಧಾರ್ಮಿಕ ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಆಗಮಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ, ಶ್ರೀಮಾತಾ ತೇಜೋಮಯಿ, ಗುರುಮಾತಾ ವಿಜಯ ಬದ್ದಿ, ವಹಿಸಿದ್ದರು ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀಮತಿ ಶಿಲ್ಪಾ ಶೆಟ್ಟರ್, ಹು-ಡಾ ಮುಖ್ಯ ಅತಿಥಿಗಳಾಗಿ ಎಸ್.ಎಸ್.ಕೆ ಸಮಾಜ ಅಧ್ಯಕ್ಷರಾದ ಸತೀಶ ಮೆಹರವಾಡೆ ಮಾಜಿ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಮಾಜಿ ಶಾಸಕ ಅಶೋಕ ಕಾಟವೆ, ಎಸ್.ಎಸ್.ಕೆ ಬ್ಯಾಂಕಿನ ಚೇರ್ಮನ್ ವಿಠ್ಠಲ ಲದ್ವಾ, ಸ್ಕೈ ಟೂನ್ ಗ್ರೂಪ್ ಮಾಲೀಕರಾದ ಶ್ರೀ ಶ್ರೀಧರ ಪವಾರ ಬಾ. ಶಶಿಕುಮಾರ್ ಮೇಹರವಾಡೆ ಪಿ ಆರ್ ಹಬೀಬ ಎನ್.ಆರ್.ಹಬೀಬ್, ಹು-ಧಾ ಪಾಲಿಕೆ ಸದಸ್ಯೆ ಪ್ರೀತಿ ವಿನಾಯಕ ಲದ್ವಾ, ಸರಸ್ವತಿ ಧೋಂಗಡಿ ಸೇರಿದಂತೆ ನೂರಾರು ಎಸ್.ಎಸ್.ಕೆ ಸಮಾಜದ ಗಣ್ಯರು ಆಗಮಿಸಿ ನಾಗರಾಜ ಪಟ್ಟಣ ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ ಎಸ್.ಎಸ್.ಕೆ ಸಮಾಜಕ್ಕೆ ಉತ್ತಮ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಉದ್ಯಮಿ ನಾಗರಾಜ್ ಪಟ್ಟಣ ಅವರು ಇನ್ನಷ್ಟು ಕೀರ್ತಿ, ಸಾಧನೆ ಮಾಡಲಿ ಎಂಬುದೇ ಹುಬ್ಬಳ್ಳಿ ಜನರ ಆಶಯವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/09/2022 06:18 pm