ನವಲಗುಂದ : ನವಲಗುಂದ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಶ್ರೀಚಕ್ರ ಧಾರಣೆ ಬಳ್ಳಾರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಸಮಗಾರ ಸಮಾಜದ ವತಿಯಿಂದ ದಸರಾ ಉತ್ಸವ ಅಂಗವಾಗಿ 11 ದಿನ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ.
ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 5ರವರೆಗೆ ಶ್ರೀದೇವಿ ಪಾರಾಯಣ, ರುದ್ರಾಭಿಷೇಕ, ವಿಶೇಷ ಅಲಂಕಾರ, ದುರ್ಗಾಷ್ಟೋತ್ತರ, ಕುಂಕುಮಾರ್ಚನೆ ಮತ್ತು ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಲಿದ್ದು, ಅಕ್ಟೋಬರ್ 4ರಂದು ಮಹಾಪೂಜೆ ನಡೆಯಲಿದೆ.
ಅಕ್ಟೋಬರ್ 5ರಂದು ಸಂಜೆ 5 ಗಂಟೆಗೆ ಶ್ರೀದೇವಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ. ನಿತ್ಯ ಮಂಗಳಾರತಿ ಅಣ್ಣಿಗೇರಿ ಸೀತಾಗರಿಯ ಡಾ. ಏ ಸಿ ವಾಲಿ ಅವರು ಆಶೀರ್ವಚನ ನೀಡಲಿದ್ದಾರೆ. ವೆ ಮೂ ನವೀನ ಶಾಸ್ತ್ರಿ ಹಿರೇಮಠ ನೇತ್ರತ್ವ ವಹಿಸಲಿದ್ದಾರೆ ಎಂದು ಪ್ರೊ. ಪಿ ಎಂ ಹೊನಕೇರಿ ತಿಳಿಸಿದ್ದಾರೆ.
Kshetra Samachara
27/09/2022 10:05 am